ADVERTISEMENT

ಇದೇ 20ರಿಂದ ಬಿಯರ್ ತುಸು ತುಟ್ಟಿ: ರಾಜ್ಯ ಸರ್ಕಾರ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 23:30 IST
Last Updated 9 ಜನವರಿ 2025, 23:30 IST
ಬಿಯರ್‌ 
ಬಿಯರ್‌    

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಬಿಯರ್‌ ಪ್ರಿಯರಿಗೆ ತುಸು ಕಹಿ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರವು, ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ.

ವಿವಿಧ ಬಿಯರ್‌ಗಳ ಮೇಲಿನ ಸುಂಕವನ್ನು ಏರಿಕೆ ಮಾಡಿರುವ ಅಧಿಸೂಚನೆ ಬುಧವಾರ ಹೊರಬಿದ್ದಿದ್ದು, ಇದೇ 20ರಿಂದ ಜಾರಿಯಾಗಲಿದೆ. ಸುಂಕ ಪ್ರಮಾಣ ಏರಿಕೆಯ ಆಧಾರದಲ್ಲಿ ಕೆಲ ಪ್ರೀಮಿಯಂ ಬಿಯರ್‌ಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ₹10ರಿಂದ ₹50ರವರೆಗೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಬಿಯರ್ ಮೇಲಿನ ಸುಂಕ ಏರಿಕೆ ಸಂಬಂಧ 2024ರ ಆಗಸ್ಟ್‌ನಲ್ಲೇ ಕರಡನ್ನು ಹೊರಡಿಸಲಾಗಿತ್ತು. ಆದರೆ ಜಾರಿಗೆ ಬಂದಿರಲಿಲ್ಲ. ಈಗ ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದ ಆರಂಭದಲ್ಲೇ ಜಾರಿಗೆ ತರಲಾಗಿದೆ.

ADVERTISEMENT

‘ಈ ಆರ್ಥಿಕ ವರ್ಷದಲ್ಲಿ ಐಎಂಎಲ್‌ ಮಾರಾಟ ತುಸು ಕಡಿಮೆ ಇದ್ದು, ಬಿಯರ್‌ ಮಾರಾಟ ಏರಿಕೆಯ ಹಾದಿಯಲ್ಲಿತ್ತು. ಆದರೆ ಈಗ ಸುಂಕ ಏರಿಕೆ ಮಾಡಿರುವ ಕಾರಣ ಬಿಯರ್ ಮಾರಾಟಕ್ಕೆ ಸ್ವಲ್ಪ ಧಕ್ಕೆಯಾಗಬಹುದು. ಆದರೆ ಬೇಸಿಗೆ ಆರಂಭದ ವೇಳೆಗೆ ಬಿಯರ್ ಮಾರಾಟ ಏರಿಕೆಯ ಹಾದಿಗೆ ಮರಳುವ ಸಾಧ್ಯತೆ ಇದೆ’ ಎನ್ನುತ್ತಾರೆ ಬೆಂಗಳೂರಿನ ವಿಜಯನಗರದ ಮದ್ಯ ಮಾರಾಟಗಾರ ವಿನಯ್.

(ಯಾವುದು ಹೆಚ್ಚೋ ಅದು ಅನ್ವಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.