ADVERTISEMENT

ಅನರ್ಹ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 6:06 IST
Last Updated 27 ಆಗಸ್ಟ್ 2019, 6:06 IST
   

ಬೆಂಗಳೂರು: ಅನರ್ಹ ಶಾಸಕರ ಮೇಲ್ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.

ಸ್ಪೀಕರ್ ಆದೇಶ ಪ್ರಶ್ನಿಸಿ 17 ಜನ ಅನರ್ಹ ಶಾಸಕರು ಮೇಲ್ಮನವಿ ಸಲ್ಲಿಸಿದ್ದರು. ಅನರ್ಹ ಶಾಸಕರ ‌ಪರ‌ ಹಿರಿಯ ವಕೀಲ ವಿ.ಗಿರಿ ಅವರು ತ್ವರಿತ ವಿಚಾರಣೆ ಕೋರಿ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ರಿಜಿಸ್ಟ್ರಾರ್‌ ಅವರಿಗೆ ಪ್ರಕರಣವನ್ನು ಲಿಸ್ಟ್ ಮಾಡುವಂತೆ ಸೂಚಿಸಿತು. ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಇದೇ ವಾರ ಲಿಸ್ಟ್ ಮಾಡುವ ಸಾಧ್ಯತೆ.

ಜುಲೈ 26 ಹಾಗೂ ಆಗಸ್ಟ್‌ 1 ರಂದು ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 17 ಜನ ಅನರ್ಹ ಶಾಸಕರು ಅರ್ಜಿ ಸಲ್ಲಿಸಿದ್ದ‌ರು.

ADVERTISEMENT

ಈ‌ ಹಿಂದೆಯೂ ಒಮ್ಮೆ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಪೀಠದೆದುರು ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮನವಿ ಸಲ್ಲಿಸಿದ್ದರು. ಆದರೆ, ರಿಜಿಸ್ಟ್ರಾರ್‌ರಿಂದಲೇ ವಿಚಾರಣೆಗೆ ಲಿಸ್ಟ್ ಆಗಲಿ ಎಂದು ಪೀಠ ತಿಳಿಸಿತ್ತು.

ಅನರ್ಹಗೊಂಡಿರುವ ಶಾಸಕರು ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ ಹಾಗೂ 15ನೇವಿಧಾನಸಭೆ ಅವಧಿ (2023 ರವರೆಗೆ) ಮುಗಿಯುವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹಿಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ತೀರ್ಪು ನೀಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.