ADVERTISEMENT

ಸುಪ್ರೀಂಕೋರ್ಟ್‌ ತೀರ್ಪು: ಅನರ್ಹಗೊಳಿಸಿದ್ದು ಸರಿ, ಅವಧಿ ನಿರ್ಧರಿಸಿದ್ದು ತಪ್ಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2019, 6:38 IST
Last Updated 13 ನವೆಂಬರ್ 2019, 6:38 IST
   

ನವದೆಹಲಿ:‘ಪಕ್ಷಾಂತರವನ್ನು ಪ್ರೋತ್ಸಾಹಿಸಲು ಆಗುವುದಿಲ್ಲ. ಸ್ಪೀಕರ್‌ ತೆಗೆದುಕೊಂಡ ನಿರ್ಧಾರ ಸರಿಯಿದೆ’ ಎಂದಸುಪ್ರೀಂಕೋರ್ಟ್‌ ಸ್ಪೀಕರ್‌ ಅಧಿಕಾರವ್ಯಾಪ್ತಿಯಬಗ್ಗೆಯೂ ತನ್ನ ನಿಲುವು ಸ್ಪಷ್ಟಪಡಿಸಿತು.

‘ಚುನಾವಣೆಯಲ್ಲಿ ಗೆಲ್ಲುವ ತನಕ ಅನರ್ಹರುಸಚಿವ ಸ್ಥಾನ ಸೇರಿದಂತೆ ಸರ್ಕಾರದ ಯಾವುದೇ ಗೌರವಧನದ ಹುದ್ದೆ ಅಲಂಕರಿಸುವಂತಿಲ್ಲ’ ಎಂದು ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತು.

ಸುಪ್ರೀಂಕೋರ್ಟ್‌ ತೀರ್ಪಿನಸಾರವನ್ನುಐದು ಅಂಶಗಳಲ್ಲಿ ಹೀಗೆ ಹಿಡಿದಿಡಬಹುದು.

ADVERTISEMENT

1) ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು.

2) ಚುನಾವಣೆ ಗೆಲ್ಲುವವರೆಗೆ ಅನರ್ಹತೆ ಇರುತ್ತದೆ.

3) ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿರುವುದುಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಾಗುವುದಿಲ್ಲ.

4) ನಿಯಮ ಮೀರಿ ನಡೆದುಕೊಂಡರವನ್ನುಅನರ್ಹಗೊಳಿಸುವಅಧಿಕಾರಸ್ಪೀಕರ್‌ಗೆ ಇದೆ. ಆದರೆ ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಅವರಿಗೆ ಇಲ್ಲ.

5) ಶಾಸಕರು ರಾಜೀನಾಮೆ ಪತ್ರ ತಂದರೆ ಸ್ಪೀಕರ್ ಅದನ್ನು ಅಂಗೀಕರಿಸಬೇಕು.ವ್ಯಾಖ್ಯಾನ ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.