ADVERTISEMENT

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ: ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2025, 15:54 IST
Last Updated 22 ಮೇ 2025, 15:54 IST
   

ಬೆಂಗಳೂರು: ಮೈಸೂರ್ ಸ್ಯಾಂಡಲ್‌ ಸೋಪ್‌ ರಾಯಭಾರಿಯನ್ನಾಗಿ ಕನ್ನಡ ನಟಿ ಬದಲು ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

‘ಇವತ್ತಿನಿಂದ ಮೈಸೂರು ಸ್ಯಾಂಡಲ್ ಸೋಪ್‌ ಅನ್ನು ಖರೀದಿಸುವುದನ್ನು ನಿಲ್ಲಿಸುತ್ತೇನೆ. ನಮ್ಮ ತೆರಿಗೆ ಹಣ ಹೀಗೆ ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಮನ್ನಾ ಭಾಟಿಯ ಅವರನ್ನು ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಆ ಸ್ಥಾನಕ್ಕೆ ಕನ್ನಡ ನಟಿಯರನ್ನು ನೇಮಕ ಮಾಡಿಲ್ಲ ಏಕೆ? ನಮ್ಮ ರಾಜ್ಯದ ನಟಿ ರುಕ್ಮಿಣಿ ವಸಂತ್ ಅವರನ್ನು ನೇಮಕ ಮಾಡಬಾರದೇಕೆ’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ADVERTISEMENT

‘ಕರ್ನಾಟಕದ ಜನಸಂಖ್ಯೆ 6.5 ಕೋಟಿ ಇದೆ ಎಂದುಕೊಂಡರೂ ಅದರಲ್ಲಿ 2 ಕೋಟಿ ಮಹಿಳೆಯರಿದ್ದಾರೆ. ಆದರೂ ಮೈಸೂರು ಸ್ಯಾಂಡಲ್ ಸೋಪಿಗೆ ಬ್ರಾಂಡ್ ಅಂಬಾಸಿಡರ್ ಆಗಲು ಕರ್ನಾಟದಿಂದ ಒಬ್ಬ ಮಹಿಳಾ ಮುಖ ಸಿಗಲಿಲ್ಲ. ಅದಕ್ಕೂ ಹಿಂದಿ ನಟಿಯೇ ಬೇಕಾಯಿತು’ ಎಂದು ಲೇವಡಿ ಮಾಡಿದ್ದಾರೆ.

‘ನಂದಿನಿ, ಮೈಸೂರು ಸ್ಯಾಂಡಲ್ ಸೋಪ್‌ ಮತ್ತು ಮೈಸೂರು ಸಿಲ್ಕ್‌ನಂತಹ ಉತ್ಪನ್ನಗಳಿಗೆ ಜನಪ್ರಿಯ ಮುಖದ ಅಗತ್ಯವಿಲ್ಲ. ಅವಷ್ಟಕ್ಕೆ ಅವು ಮಾರಟವಾಗುತ್ತವೆ. ನೀವು ಮಾಡಬೇಕಾಗಿರುವುದು ಗುಣಮಟ್ಟ ಕಾಪಾಡಿಕೊಳ್ಳುವುದು, ಪೂರೈಕೆ ಸರಪಳಿಯನ್ನು ಅತ್ಯುತ್ತಮವಾಗಿಸುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಏನತ್ಮಧ್ಯೆ, ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿರುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ಕೆಲವರು, 'ಕರ್ನಾಟಕದ ಹೊರಗೆ ಮೈಸೂರು ಸ್ಯಾಂಡಲ್ ಮಾರಾಟ ಮಾಡಲು ನಮಗೆ ಜನಪ್ರಿಯ ಮುಖ ಬೇಕಿದೆ. ಅದಕ್ಕೆ ತಮನ್ನಾ ಅವರನ್ನು ಆಯ್ಕೆ ಮಾಡಿರುವುದು ಸರಿ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.