ADVERTISEMENT

ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್‌ ಸವಾಲು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
ಶ್ರೀನಿವಾಸ್‌ ಬಿ.ವಿ
ಶ್ರೀನಿವಾಸ್‌ ಬಿ.ವಿ   

ನವದೆಹಲಿ: ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಯಾವಾಗ ತೆರೆಯಬೇಕೆಂದು ಸಾಮಾನ್ಯ ಜ್ಞಾನ ಇಲ್ಲದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈಗ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ವ್ಯಂಗ್ಯವಾಡಿದ್ದಾರೆ. 

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಬುದ್ಧಿವಂತಿಕೆ ಎಲ್ಲಿತ್ತು? ತಮ್ಮ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅವರಿಗೆ ಇದ್ದಕ್ಕಿದ್ದಂತೆ ಬೆಂಗಳೂರಿನ ಸಂಚಾರ ಅವ್ಯವಸ್ಥೆಯ ಅರಿವಾಯಿತೇ‘ ಎಂದು ಅವರು ಪ್ರಶ್ನಿಸಿದ್ದಾರೆ. ದಟ್ಟಣೆ ಕಡಿಮೆ ಮಾಡುವುದು ಪ್ರಮುಖ  ಆದ್ಯತೆಯಾಗಿದ್ದರೆ, ಅವರ ಪಕ್ಷವು ಜನಾದೇಶ ಹೊಂದಿದ್ದಾಗ ಅವರು ಪವರ್‌ಪಾಯಿಂಟ್ ಮೂಲಕ ಸಲಹೆ ನೀಡಲಿಲ್ಲ ಏಕೆ‘ ಎಂದು ಅವರು ಕೇಳಿದ್ದಾರೆ. 

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಭಾರತದ ಐಟಿ ಹಬ್‌ ಆಯಿತು. ತೇಜಸ್ವಿ ಅವರಂತಹ ಸ್ವಯಂಘೋಷಿತ ‘ನಗರ ಯೋಜನೆ ತಜ್ಞರ‘ ಶಬ್ದ ಮಾಲಿನ್ಯದ ಹೊರತಾಗಿಯೂ ನಗರ ಮತ್ತಷ್ಟು ಪ್ರಗತಿ ಸಾಧಿಸುತ್ತಿದೆ. ಇಂತಹ ಚಿಲ್ಲರೆ ರಾಜಕಾರಣ ಮಾಡಿ ಪುಕ್ಕಟೆ ಸಲಹೆ ನೀಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲಿ‘ ಎಂದು ಅವರು ಸವಾಲು ಹಾಕಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.