ADVERTISEMENT

ಪ್ರಯಾಣಿಕರ ಗಮನಕ್ಕೆ: ಶಿವಮೊಗ್ಗ, ಹುಬ್ಬಳ್ಳಿಗೆ ತೆರಳುವ ಹಲವು ರೈಲುಗಳು ರದ್ದು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 12:38 IST
Last Updated 13 ಫೆಬ್ರುವರಿ 2026, 12:38 IST
<div class="paragraphs"><p>&nbsp;ಸಾಂದರ್ಭಿಕ ಚಿತ್ರ</p></div>

 ಸಾಂದರ್ಭಿಕ ಚಿತ್ರ

   

ರಾಷ್ಟ್ರೀಯ ಹೆದ್ದಾರಿ–206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಬಿರೂರು–ತಾಳಗುಪ್ಪ ಹಾಗೂ ಅರಸೀಕೆರೆ–ಚಿಕ್ಕಜಾಜೂರು ನಡುವೆ ರೈಲ್ವೆ 'ಲೈನ್ ಬ್ಲಾಕ್' ಇರುವುದರಿಂದ. ಈ ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ರೈಲುಗಳ ಸಂಚಾರ ರದ್ದು:

  • ತುಮಕೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16567) ಫೆಬ್ರವರಿ 16, 19, 23, 24 ಹಾಗೂ ಮಾರ್ಚ್ 2 ರಿಂದ 5ರವರೆಗೆ ಸಂಚರಿಸುವುದಿಲ್ಲ.

    ADVERTISEMENT
  • ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್ (16568) ರೈಲು ಫೆ. 17, 20, 24, 25 ಹಾಗೂ ಮಾರ್ಚ್ 3 ರಿಂದ 6ರವರೆಗೆ ರದ್ದಾಗಲಿದೆ.

  • ಹುಬ್ಬಳ್ಳಿ–ಅರಸೀಕೆರೆ ಎಕ್ಸ್‌ಪ್ರೆಸ್ (16214) ಫೆ. 23, 24 ಹಾಗೂ ಅರಸೀಕೆರೆ–ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213) ಫೆ. 24, 25 ರಂದು ರದ್ದಾಗಿವೆ.

  • ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ-ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090) ರೈಲುಗಳು ಫೆ.24 ಮತ್ತು 25 ರಂದು ರದ್ದಾಗಿವೆ.

ತಡವಾಗಿ ಹೊರಡುವ ರೈಲುಗಳು:

  • ಶಿವಮೊಗ್ಗ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12090) ಫೆ. 17, 20 ಮತ್ತು ಮಾರ್ಚ್‌ 3 ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ.

  • ಅದೇ ರೀತಿ, ಅರಸೀಕೆರೆ–ಹುಬ್ಬಳ್ಳಿ ರೈಲು (16213) ಫೆ. 17, 20 ಮತ್ತು ಮಾರ್ಚ್‌ 3 ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.

ರೈಲುಗಳ ನಿಯಂತ್ರಣ:

  • ಫೆ. 25 ರಂದು ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661) ಮಾರ್ಗಮಧ್ಯೆ 35 ನಿಮಿಷ ನಿಯಂತ್ರಣವಾಗಲಿದೆ.

  • ತಾಳಗುಪ್ಪ– ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652) ಫೆ. 24 ಮತ್ತು 25 ರಂದು 75 ನಿಮಿಷಗಳ ಕಾಲ ಹಾಗೂ ಚಿಕ್ಕಮಗಳೂರು–ಶಿವಮೊಗ್ಗ ಪ್ಯಾಸೆಂಜರ್ (56272) ರೈಲು ಅರ್ಧ ಗಂಟೆ ಕಾಲ ಮಾರ್ಗಮಧ್ಯೆ ವಿಳಂಬವಾಗಿ ಸಂಚರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.