
ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಭೀಮಸಂದ್ರ ನಿಲ್ದಾಣದಲ್ಲಿ ಹೈಟ್ ಸಬ್ ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್–28 ರಲ್ಲಿನ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಚಿಕ್ಕಮಗಳೂರು – ಯಶವಂತಪುರ (16239) ದೈನಂದಿನ ಎಕ್ಸ್‌ಪ್ರೆಸ್
ಯಶವಂತಪುರ – ಚಿಕ್ಕಮಗಳೂರು (16240) ದೈನಂದಿನ ಎಕ್ಸ್‌ಪ್ರೆಸ್
ಕೆಎಸ್ಆರ್ ಬೆಂಗಳೂರು – ಮೈಸೂರು (12614) ದೈನಂದಿನ ಎಕ್ಸ್‌ಪ್ರೆಸ್
ಡಿಸೆಂಬರ್ 17, 20, 21 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು–ತುಮಕೂರು (66567) ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಕೊನೆಗೊಳ್ಳಲಿದೆ.
ಡಿಸೆಂಬರ್ 17, 20, 21 ಮತ್ತು 24 ರಂದು ತುಮಕೂರು–ಕೆಎಸ್ಆರ್ ಬೆಂಗಳೂರು (66572) ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ಪ್ರಾರಂಭವಾಗಲಿದೆ.
ಡಿ. 17, 20, 21 ಮತ್ತು 24 ರಂದು ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652) ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬದಲಾಗಿ ಅರಸೀಕೆರೆಯಲ್ಲಿ ಕೊನೆಗೊಳ್ಳಲಿದೆ.
ಡಿ. 17, 20, 21 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ (12725) ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರು ಬದಲಾಗಿ ಅರಸೀಕೆರೆಯಿಂದ ಪ್ರಾರಂಭವಾಗಲಿದೆ.
ಡಿ. 17 ಮತ್ತು 24 ರಂದು ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ (12726) ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರು ಬದಲಾಗಿ ಅರಸೀಕೆರೆಯಲ್ಲಿ ಕೊನೆಗೊಳ್ಳಲಿದೆ.
ಡಿ. 17 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (66571) ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಕೊನೆಗೊಳ್ಳಲಿದೆ.
ಡಿ. 17 ಮತ್ತು 24 ರಂದು ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (66568) ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ಆರಂಭವಾಗಲಿದೆ.
ಡಿ. 17 ಮತ್ತು 24 ರಂದು ಚಾಮರಾಜನಗರ–ತುಮಕೂರು ಪ್ಯಾಸೆಂಜರ್ (56281) ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ಚಿಕ್ಕಬಾಣಾವರದಲ್ಲಿ ಕೊನೆಗೊಳ್ಳಲಿದೆ.
ಡಿ. 16 ಮತ್ತು 23 ಹೊರಡುವ ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (17310) ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಡಿ. 16 ಮತ್ತು 23 ರಂದು ಪ್ರಯಾಣ ಆರಂಭಿಸುವ ವೇಲಂಕಣಿ–ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17316) ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರಿನಲ್ಲಿ ನಿಲ್ಲಿಸುವುದಿಲ್ಲ.
ಡಿ. 17, 20, 21 ಮತ್ತು 24ರಂದು ಪ್ರಯಾಣ ಆರಂಭಿಸುವ ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ (17326) ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪಾಂಡವಪುರದಿಂದ ತಿಪಟೂರಿನವರೆಗಿನ ನಿಲುಗಡೆ ಇರುವುದಿಲ್ಲ.
ಡಿ. 17, 20, 21 ಮತ್ತು 24 ರಂದು ಪ್ರಯಾಣ ಆರಂಭಿಸುವ ಯಶವಂತಪುರ–ಶಿವಮೊಗ್ಗ ಟೌನ್ (16579) ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ತುಮಕೂರು ಮತ್ತು ತಿಪಟೂರು ನಿಲುಗಡೆ ಇರುವುದಿಲ್ಲ.
ಡಿ.17 ಮತ್ತು 24 ರಂದು ನಿಲ್ದಾಣದಿಂದ ಹೊರಡುವ ಯಶವಂತಪುರ–ಚಂಡೀಗಢ ಎಕ್ಸ್‌ಪ್ರೆಸ್ (22685), ಯಶವಂತಪುರ–ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ (17309) ಮತ್ತು ಕೆಎಸ್ಆರ್ ಬೆಂಗಳೂರು–ತಾಳಗುಪ್ಪ ಎಕ್ಸ್‌ಪ್ರೆಸ್ (20651) ಸಂಚಾರ 15 ನಿಮಿಷ ತಡವಾಗಲಿದೆ.
ಡಿ. 19 ಮತ್ತು 20 ರಂದು ಹೊರಡುವ ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್ ಪ್ರೆಸ್ (17310) 30 ನಿಮಿಷ ತಡವಾಗಲಿದೆ.
ಡಿ. 15 ಮತ್ತು 22 ರಂದು ಪ್ರಯಾಣ ಆರಂಭಿಸುವ ಉದಯಪುರ ಸಿಟಿ–ಮೈಸೂರು ಹಮ್ ಸಫರ್ ವೀಕ್ಲಿ ಎಕ್ಸ್‌ಪ್ರೆಸ್ (19667) ಉದಯಪುರ ಸಿಟಿಯಿಂದ 3 ಗಂಟೆ ತಡವಾಗಲಿದೆ.
ಶ್ರೀ ಗಂಗಾನಗರ–ತಿರುಚ್ಚಿರಾಪಳ್ಳಿ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ (22497) ಶ್ರೀ ಗಂಗಾನಗರದಿಂದ 2 ಗಂಟೆ ತಡವಾಗಿ ಹೊರಡಲಿವೆ. ಮಾರ್ಗಮಧ್ಯೆ 60 ನಿಮಿಷಗಳ ತಡವಾಗಲಿದೆ.
ಡಿ. 17 ಮತ್ತು 24ರಂದು ಪ್ರಯಾಣ ಆರಂಭಿಸುವ ಯಶವಂತಪುರ–ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12649), ತುಮಕೂರು–ಚಾಮರಾಜನಗರ ದೈನಂದಿನ ಪ್ಯಾಸೆಂಜರ್ (56282) ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ–ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (12777) ಮೂಲ ನಿಲ್ದಾಣಗಳಿಂದ 2 ಗಂಟೆ ತಡವಾಗಿ ಹೊರಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.