ADVERTISEMENT

ಕೆಎಸ್ಸಾರ್ಟಿಸಿ ನೌಕರರಿಗೆ ಮೇ ತಿಂಗಳ ಸಂಬಳ ನೀಡುತ್ತೇವೆ ಆತಂಕ ಬೇಡ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 10:20 IST
Last Updated 27 ಮೇ 2020, 10:20 IST
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ   

ದಾವಣಗೆರೆ:ಈಗಾಗಲೇ 460 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿಗೆ ಮೇ ತಿಂಗಳ ಸಂಬಳ ನೀಡಲಾಗುವುದು, ಯಾವಸಿಬ್ಬಂದಿಯೂ ಆತಂಕಕ್ಕೆ ಒಳಗಾಗಬೇಡಿ, ಸಾರಿಗೆ ಸಂಸ್ಥೆ₹1800 ಕೋಟಿ ಸಾರಿಗೆ ಇಲಾಖೆ ನಷ್ಟ ಅನುಭವಿಸಿದೆ ಹೇಳಿದ್ದಾರೆ.

ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೂನ್1ರಿಂದ ಕೇಂದ್ರದ ಮರ್ಗಸೂಚಿಯನ್ವಯ ಹೆಚ್ಚು ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಎಂದು ಹೇಳಿದರು.

ಅಂತರರಾಜ್ಯ ಬಸ್ ಸಂಚಾರಕ್ಕೆಕ್ರಮ ಕೈಗೊಳ್ಳಬೇಕಾಗಿತ್ತು. ಕೊರೊನಾ ಹೆಚ್ಚು ಇರುವುದರಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಸದ್ಯಕ್ಕೆ ಇಲ್ಲ. ಆದರೆ, ರಾಜ್ಯದಗ್ರಾಮೀಣ, ಪಟ್ಟಣ ಪ್ರದೇಶದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ADVERTISEMENT

ರಾತ್ರಿ ಬಸ್ ಸಂಚಾರ ಪ್ರಾರಂಭಿಸಲು ಸೂಚನೆ ನೀಡಿದ್ದು, ಪರ ಊರುಗಳಿಗೆ ತೆರಳಲು ಬಸ್ ಸಂಚಾರ ಆರಂಭಿಸುತ್ತಿದ್ದೇವೆ ಎಂದುಹೇಳಿದ್ದಾರೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ₹123 ಕೋಟಿವೆಚ್ಚದಲ್ಲಿ ಹೊಸ ವಿನ್ಯಾಸಯುಳ್ಳ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಟೆಂಡರ್ ಪೂರ್ಣಗೊಳಿಸಿ ಅಡಿಗಲ್ಲು ಹಾಕುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಎಸಿ ಬಸ್ ಸಂಚಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆಗೆ ಮನವಿ ಮಾಡಲಾಗಿದೆ. ವಿಮಾನದಲ್ಲಿ ಎಸಿ ಇರುತ್ತದೆ. ಎಸಿ ಬಸ್ ಓಡಿಸಲು ಚಿಂತನೆ ನಡೆಸಲಾಗುವುದು.ಆಟೋರಿಕ್ಷಾ, ಟ್ಯಾಕ್ಸಿ ಡ್ರೈವರ್‌ಗೆ ಅಕೌಂಟ್‌ಗೆ 5 ಸಾವಿರಸೇವಾ ಸಿಂಧು ಆ್ಯಪ್ ನಲ್ಲಿ 11.28 ಲಕ್ಷ ನೋಂದಣಿ ಆಗಿದೆ. ಅವರಿಗೆ ನಾಳೆಯಿಂದಲೇ ಅಕೌಂಟ್ ಗೆ ₹ 5000 ಹಾಕುತ್ತೇವೆ. ಆರೂವರೆ ಲಕ್ಷ ಚಾಲಕರಿದ್ದಾರೆ, ಅರ್ಜಿ ಸಲ್ಲಿಸಿಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಮೇ ತಿಂಗಳ ಸಂಬಳ ಕೊಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.