ADVERTISEMENT

ಶೋಭಾ ಮಾತಿಗೆ ಸಿದ್ದು ಕಿವಿಮಾತು: ನಿರ್ಲಕ್ಷ್ಯಕ್ಕೊಳಗಾದವರ ನೋಯಿಸದಿರಿ ಎಂದು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 8:51 IST
Last Updated 15 ಜೂನ್ 2019, 8:51 IST
   

ಬೆಂಗಳೂರು: ಜಿಂದಾಲ್‌ಗೆ ಭೂಮಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರುಸರ್ಕಾರವನ್ನು ಉದ್ದೇಶಿಸಿ ಬಳಸಿರುವ ಪದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿರ್ಲಕ್ಷಿತ ಸಮುದಾಯಗಳಿಗೆ ನೋವಾಗುವ ಮಾತುಗಳನ್ನಾಡಬೇಡಿಎಂದು ಸಲಹೆ ನೀಡಿದ್ದಾರೆ.

ಪ್ರತಿಭಟನೆ ಕುರಿತುಶುಕ್ರವಾರ ಟ್ವೀಟ್‌ ಮಾಡಿದ್ದ ಶೋಭಾ ಕರಂದ್ಲಾಜೆ ಅವರು, ‘ಉತ್ಕೃಷ್ಟ ಕಬ್ಬಿಣದ ಅದಿರು ಇರುವ 3667 ಎಕೆರೆ ಭೂಮಿಯನ್ನು ಜಿಂದಾಲ್‌ ಸಂಸ್ಥೆಗೆ ಅತಿ ಕಡಿಮೆ ದರದಲ್ಲಿ ನೀಡುತ್ತಿರುವಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿ ಮಾತನಾಡಿದೆ. ಸಿದ್ದರಾಮಯ್ಯನವರೆ ಮತ್ತು ಕುಮಾರಸ್ವಾಮಿ ಅವರೇ ಈ ಒಪ್ಪಂದದ ಕುರಿತ ನಿಮ್ಮ ಮೌನದ ಹಿಂದಿನ ಕಾರಣವನ್ನು ರಾಜ್ಯದ ಜನ ಅರಿಯಲು ಬಯಸಿದ್ದಾರೆ,’ ಎಂದು ಬರೆದುಕೊಂಡಿದ್ದರು.ಟ್ವೀಟ್‌ನಲ್ಲಿಸರ್ಕಾರದ ವಿರುದ್ಧ ಆಕ್ಷೇಪಾರ್ಹ ಪದ ಬಳಸಿರುವ ಶೋಭಾ ಅವರು #CoJaJindalNexus! ಎಂಬಹ್ಯಾಶ್‌ ಟ್ಯಾಗ್‌ ಅನ್ನೂ ಬಳಸಿದ್ದರು.

ಶೋಭಾ ಕರಂದ್ಲಾಜೆ ಅವರ ಪದ ಬಳಕೆಗೆ ಟ್ವೀಟ್‌ ಮಾಡಿ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಕುಮಾರಿ ಶೋಭಾ ಕರಂದ್ಲಾಜೆ ಅವರೆ,ವಾಕ್ಚಾತುರ್ಯವನ್ನು ಪ್ರದರ್ಶಿಸುವುದಷ್ಟೇ ನಿಮ್ಮ ಉದ್ದೇಶವಾಗಿದ್ದರೆ ‘ಮೈತ್ರಿ’ ಎಂಬ ಪದ ಬಳಸಬಹುದಿತ್ತು. ಬೇಸರಗೊಳ್ಳಬೇಡಿ, ಸಮಾಜದಲ್ಲಿ ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವನ್ನು ಅಸಾಂವಿಧಾನಿಕ ಮಾತುಗಳ ಮೂಲಕನೋಯಿಸಬೇಡಿ,’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ಶೋಭಾ ಕರಂದ್ಲಾಜೆ ಅವರ ಇಂಥ ಹೇಳಿಕೆಗಳು ಇದೇ ಮೊದಲೇನಲ್ಲ. ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಶಾಸಕರನ್ನು ಹಿಡಿದುಕೊಳ್ಳಲಾಗದಿದ್ದರೆ ಬಳೆ ತೊಟ್ಟು ಕೊಳ್ಳಲಿ’ ಎಂದು ಶೋಭಾ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಈ ಹಿಂದೆ ಹೇಳಿಕೆ ಕೊಟ್ಟಿದ್ದರು. ‘ಓರ್ವ ಹೆಣ್ಣಾಗಿ ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ,’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.