ADVERTISEMENT

Tungabhadra Dam 6 ದಿನದಲ್ಲಿ 33 ಟಿಎಂಸಿ ಅಡಿ ನೀರು ಖಾಲಿ; ಇಂದು ನಿರ್ಣಾಯಕ ದಿನ?

ಗೇಟ್ ಅಳವಡಿಕೆಗೆ ಇಂದು ನಿರ್ಣಾಯಕ ದಿನ?

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 3:16 IST
Last Updated 16 ಆಗಸ್ಟ್ 2024, 3:16 IST
<div class="paragraphs"><p>ತುಂಗಭದ್ರಾ ಅಣೆಕಟ್ಟೆ</p></div>

ತುಂಗಭದ್ರಾ ಅಣೆಕಟ್ಟೆ

   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಲೇ ಇದ್ದು, ಅದರಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಯತ್ನ ಶುಕ್ರವಾರ ಬೆಳಿಗ್ಗೆ 9ರಿಂದ ಮತ್ತೆ ಆರಂಭವಾಗಲಿದೆ.

ಜಿಂದಾಲ್‌ನಿಂದ ಇನ್ನೊಂದು ಗೇಟ್‌ (ಪ್ಲಾನ್‌ ಬಿ) ಗುರುವಾರ ರಾತ್ರಿ 9ರ ಸುಮಾರಿಗ ಅಣೆಕಟ್ಟೆ ಪ್ರದೇಶಕ್ಕೆ ಬಂದಿದ್ದು, ಹೊಸಳ್ಳಿಯಿಂದ ಸಹ ಗೇಟ್ ತರಿಸಿಕೊಳ್ಳಲಾಗುತ್ತಿದೆ. ಮೊದಲಿಗೆ ಯಾವ ಗೇಟ್ ಅನ್ನು ನೀರಿಗೆ ಇಳಿಸುತ್ತಾರೆ, ಮತ್ತೆ ಕೊಂಡಿ ಸಮಸ್ಯೆ ಕಾಡಬಹುದೇ ಎಂಬ ಕುತೂಹಲ ಇದ್ದರೂ, ಬಹುತೇಕ ಇಂದು (ಶುಕ್ರವಾರ) ಸಂಜೆಯೊಳಗೆ ಫಲಿತಾಂಶ ಲಬಿಸುವ ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ.

ADVERTISEMENT

ಸಾಧ್ಯವಾದಷ್ಟು ಮಟ್ಟಿಗೆ ನೀರು ಉಳಿಸುತ್ತಲೇ ಗೇಟ್ ಅಳವಡಿಸಬೇಕು ಎಂಬ ಪ್ರಯತ್ನದಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ನಿರತರಾಗಿದ್ದು, ನೀರಿನ ಹೊರಹರಿವಿನ ಪ್ರಮಾಣವನ್ನು 1.10 ಲಕ್ಷ ಕ್ಯುಸೆಕ್‌ನಿಂದ 86,310 ಕ್ಯುಸೆಕ್‌ಗೆ ತಗ್ಗಿಸಿದ್ದಾರೆ. ಹೀಗಿದ್ದರೂ ಕಳದ ಆರು ದಿನಗಳಲ್ಲಿ 33 ಟಿಎಂಸಿ ಅಡಿಯಷ್ಟು ನೀರು ಜಲಾಶಯದಿಂದ ನದಿಗೆ ಹರಿದು ಹೋಗಿದೆ.

ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 1,633 ಅಡಿ ಆಗಿದ್ದು, ಸದ್ಯ 1,623.79ಕ್ಕೆ ಕುಸಿದಿದೆ. ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಆಗಿದ್ದು, ಸದ್ಯ 72.60 ಟಿಎಂಸಿ ಅಡಿ ನೀರು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.