ADVERTISEMENT

ಉಡುಪಿ: ಪತ್ತೆಯಾದ 18 ಕೋವಿಡ್ ಸೋಂಕಿತರಲ್ಲಿ ಮೂವರು ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಮೇ 2020, 10:37 IST
Last Updated 24 ಮೇ 2020, 10:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಭಾನುವಾರ ಪತ್ತೆಯಾದ 18 ಕೋವಿಡ್ ಸೋಂಕಿತರಲ್ಲಿ ಮೂವರು ಪೊಲೀಸರು ಇದ್ದಾರೆ. ಕಂಟೈನ್‌ಮೆಂಟ್ ಝೋನ್ ಸಂಪರ್ಕದಿಂದ ಕಾರ್ಕಳ ಗ್ರಾಮಾಂತರ ಠಾಣೆ, ಅಜೆಕಾರು ಹಾಗೂ ಬ್ರಹ್ಮಾವರ ಠಾಣೆಯ ಕಾನ್‌ಸ್ಟೇಬಲ್‌ಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತರು ಕಾರ್ಯ ನಿರ್ವಹಿಸುತ್ತಿದ್ದ ಮೂರು ಠಾಣೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, 48 ಗಂಟೆಗಳ ಬಳಿಕ ಸ್ಯಾನಿಟೈಸ್ ಮಾಡಿ ಬಳಸಲಾಗುವುದು. ಕಾನ್‌ಸ್ಟೇಬಲ್‌ಗಳ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ತುಂಬು ಗರ್ಭಿಣಿಯಲ್ಲಿ ಸೋಂಕು: ಸೋಂಕಿತರ ಸಂಪರ್ಕಕ್ಕೆ ಬಾರದ ಕಾರ್ಕಳ ತಾಲ್ಲೂಕಿನ 9 ತಿಂಗಳ ತುಂಬು ಗರ್ಭಿಣಿಯಲ್ಲಿ ಸೋಂಕು ಕಂಡುಬಂದಿದೆ. ಗರ್ಭಿಣಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.