ರಸ್ತೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ದೇವನಹಳ್ಳಿಯಿಂದ ತಮಿಳುನಾಡು ಗಡಿವರೆಗೆ 110.40 ಕಿ.ಮೀ ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ (ಎಚ್‌ಎಎಂ) ರಸ್ತೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇದಕ್ಕೆ ₹3,190 ಕೋಟಿ ವೆಚ್ಚವಾಗಲಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ರಸ್ತೆಯು ದೇವನಹಳ್ಳಿ, ವಿಜಯಪುರ,ಎಚ್.ಕ್ರಾಸ್, ವೇಮಗಲ್, ಮಾಲೂರು ಮೂಲಕ ತಮಿಳುನಾಡು ಗಡಿಯನ್ನು ಸಂಪರ್ಕಿಸಲಿದೆ. ಈ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಪ್ಯಾಕೇಜ್ 1– ವೇಮಗಲ್, ಮಾಲೂರು ಮತ್ತು ಕೈಗಾರಿಕಾ ಪ್ರದೇಶದಿಂದ ತಮಿಳುನಾಡು ಗಡಿವರೆಗೆ, ₹958 ಕೋಟಿ (ಕೆಶಿಪ್)
ಪ್ಯಾಕೇಜ್ 2– ಹೊಸಕೋಟೆ–ಮಾಲೂರು, ಮಾಲೂರಿನಲ್ಲಿ ಎಲಿವೇಟೆಡ್ ಕಾರಿಡಾರ್ ಸೇರಿ ಮಾಲೂರು ಕೈಗಾರಿಕಾ ಪ್ರದೇಶ ಒಳಗೊಂಡಿದೆ, ಇದರ ವೆಚ್ಚ ₹1054 ಕೋಟಿ (ಕೆಶಿಪ್)
ಪ್ಯಾಕೇಜ್ 3– ದೇವನಹಳ್ಳಿ– ವೇಮಗಲ್–ಕೋಲಾರ. ಇದರ ವೆಚ್ಚ ₹1178 ಕೋಟಿ (ಕೆಆರ್‌ಡಿಸಿಎಲ್)
ಪೊಲೀಸ್ ಭವನ ನಿರ್ಮಾಣ:
ಬೆಂಗಳೂರಿನ ಜನರಲ್ ಕೆ.ಎಸ್.ತಿಮ್ಮಯ್ಯ ರಸ್ತೆಯಲ್ಲಿನ ಕೆಎಸ್‌ಆರ್‌ಪಿ 1ನೇ ಪಡೆಯ ಆವರಣದಲ್ಲಿ ಪೊಲೀಸ್ ಇಲಾಖೆ ಸೆಂಟ್ರಲ್ ಕಮಾಂಡ್ ಸೆಂಟರ್ ಒಳಗೊಂಡಂತೆ ಪೊಲೀಸ್ ಭವನ ನಿರ್ಮಾಣಕ್ಕೆ ₹102.80 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.
ಈಕ್ವಿಟಿ ಷೇರು ಹೆಚ್ಚಳ:
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಲ್ಲಿ ರಾಜ್ಯ ಸರ್ಕಾರದ ಈಕ್ವಿಟಿ ಷೇರುಗಳ ಪ್ರಮಾಣವನ್ನು ಶೇ 49 ರಿಂದ ಶೇ 90 ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಅಭಿಯೋಜಕರ ನೇಮಕಾತಿ:
ಲೋಕಾಯುಕ್ತಕ್ಕೆ 12 ಮಂದಿ ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.