ADVERTISEMENT

ಧರ್ಮೇಗೌಡ ಸಾವಿನಿಂದ ತೆರವಾದ ಸ್ಥಾನ: ಮಾರ್ಚ್‌ 15ಕ್ಕೆ ವಿಧಾನ ಪರಿಷತ್‌ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 2:12 IST
Last Updated 19 ಫೆಬ್ರುವರಿ 2021, 2:12 IST
ಪ್ರಾತಿನಿಧಿತ ಚಿತ್ರ
ಪ್ರಾತಿನಿಧಿತ ಚಿತ್ರ   

ನವದೆಹಲಿ: ಉಪ ಸಭಾಪತಿಯಾಗಿದ್ದ ಎಸ್‌.ಎಲ್‌. ಧರ್ಮೇಗೌಡ ಅವರ ಸಾವಿನಿಂದ ತೆರವಾಗಿರುವ ರಾಜ್ಯ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.

ವಿಧಾನಸಭೆ ಸದಸ್ಯರಿಂದ ಈ ಸ್ಥಾನದ ಆಯ್ಕೆ ನಡೆಯಲಿದ್ದು, ಮಾರ್ಚ್‌ 15ರಂದು ಮತದಾನ ನಿಗದಿಪಡಿಸಿ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.

ಫೆಬ್ರುವರಿ 25ರಂದು ಈ ಸಂಬಂಧ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 4 ಕೊನೆಯ ದಿನವಾಗಿದ್ದು, ಮಾರ್ಚ್‌ 5ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಿಂದಕ್ಕೆ ಪಡೆಯಲು ಮಾರ್ಚ್‌ 8 ಕೊನೆಯ ದಿನವಾಗಿದೆ.

ADVERTISEMENT

ಮಾರ್ಚ್‌ 15ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಮತದಾನ, ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ.

ಉಪ ಸಭಾಪತಿಯಾಗಿದ್ದ ಜೆಡಿಎಸ್‌ನ ಎಸ್‌.ಎಲ್‌. ಧರ್ಮೇಗೌಡ ಅವರು ಡಿಸೆಂಬರ್‌ 28ರಂದು ಮಧ್ಯರಾತ್ರಿ ಕಡೂರು ಬಳಿ ರೈಲ್ವೆ ಟ್ರ್ಯಾಕ್‌ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.