ADVERTISEMENT

ಮಕ್ಕಳಲ್ಲಿ ಹೆಚ್ಚಿದ ವೈರಾಣು ಸೋಂಕು: ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಪರದಾಟ

ಮಕ್ಕಳಲ್ಲಿ ಹೆಚ್ಚಿದ ವೈರಾಣು ಸೋಂಕು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 18:07 IST
Last Updated 16 ಸೆಪ್ಟೆಂಬರ್ 2021, 18:07 IST
ಬಳ್ಳಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ವೈರಾಣು ಸೋಂಕು ಕಾಣಿಸಿಕೊಂಡ ಮಕ್ಕಳಿಗೆ ಹಾಸಿಗೆ ಸಿಗದೆ ಆಸ್ಪತ್ರೆಯ ಆವರಣದ ರಸ್ತೆಯಲ್ಲೇ ಪೋಷಕರು ಮಕ್ಕಳನ್ನು ಮಲಗಿಸಿರುವುದು ಗುರುವಾರ ಕಂಡುಬಂತು
ಬಳ್ಳಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ವೈರಾಣು ಸೋಂಕು ಕಾಣಿಸಿಕೊಂಡ ಮಕ್ಕಳಿಗೆ ಹಾಸಿಗೆ ಸಿಗದೆ ಆಸ್ಪತ್ರೆಯ ಆವರಣದ ರಸ್ತೆಯಲ್ಲೇ ಪೋಷಕರು ಮಕ್ಕಳನ್ನು ಮಲಗಿಸಿರುವುದು ಗುರುವಾರ ಕಂಡುಬಂತು   

ಬಳ್ಳಾರಿ: ಜಿಲ್ಲೆಯ ಹೆಚ್ಚಿನ ಮಕ್ಕಳಲ್ಲಿ ವೈರಾಣು ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಸಿಗದೆಪೋಷಕರು ಆಸ್ಪತ್ರೆ ಆವರಣದ ರಸ್ತೆಯಲ್ಲಿ ಚಿಕಿತ್ಸೆಗಾಗಿ ಗುರುವಾರ ಕಾದು ಕುಳಿತಿದ್ದರು.

ಕಳೆದ 20ದಿನಗಳಿಂದ ಬಹುತೇಕ ಮಕ್ಕಳು ಕಫ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಅನಿವಾರ್ಯವಾಗಿ ಆಸ್ಪತ್ರೆ ಆವರಣವನ್ನೇ ಆವಲಂಬಿಸಿರುವುದಾಗಿ ಪೋಷಕರು ಅಳಲು ತೊಂಡಿಕೊಂಡರು.

ಮಕ್ಕಳು ಚಿಕಿತ್ಸೆಗಾಗಿ ಆಸ್ಪತ್ರೆ ಆವರಣದ ರಸ್ತೆಯಲ್ಲಿ ಕಾದು ಕುಳಿತಿದ್ದಾರೆ ಎನ್ನುವ ವರದಿಯನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಜನಾರ್ಧನ ನಿರಾಕರಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿ ಪವನ್‍ಕುಮಾರ ಮಾಲಪಾಟಿ, ಜಿಲ್ಲಾ ಸರ್ಜನ್ ಬಸರೆಡ್ಡಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 230 ಹಾಸಿಗೆ ಸಾಮರ್ಥ್ಯ ಇದೆ. ಇದರಲ್ಲಿ 250 ಜನ ದಾಖಲಾಗಿದ್ದಾರೆ.ವೈದ್ಯಕೀಯ ದಂತ ಕಾಲೇಜಿನಲ್ಲಿ 160 ಹಾಸಿಗೆಗಳನ್ನು ವೈರಾಣು ಜ್ವರದಿಂದ ಬಳಲುವ ಮಕ್ಕಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ. ದಂತ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳನ್ನು ದಾಖಿಸುವಂತೆ ಪೋಷಕರನ್ನು ಮನವೊಲಿಸಲಾಗುತ್ತಿದೆ’ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ಧನ್‌ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.