ಮಂಗಳೂರು: 'ಹಳೆ ಸಿದ್ದರಾಮಯ್ಯನವರು ಕಳೆದುಹೋಗಿದ್ದಾರೆ' ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಬುಧವಾರ ಉತ್ತರಿಸಿದ ಅವರು, 'ನಾನು ಸಿದ್ದರಾಮಯ್ಯ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಹಳೆಯ ಸಿದ್ದರಾಮಯ್ಯನವರು ಇವತ್ತು ಇಲ್ಲ. ಇವತ್ತು ಇರುವ ಸಿದ್ದರಾಮಯ್ಯನವರ ವರ್ತನೆ ನೋಡಿ ನನಗೂ ಒಂದು ರೀತಿ ಅನುಮಾನ ಮೂಡಿದೆ' ಎಂದರು.
'ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದು' ಎಂದರು.
'ಸಿದ್ದರಾಮಯ್ಯನವರು ತಪ್ಪನ್ನು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಬೇಕು. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.