ADVERTISEMENT

ಮಾನ ಮರ್ಯಾದೆಗೆ ಅಂಜಿದ್ದೇವೆ: ಸಿ.ಪಿ.ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 9:39 IST
Last Updated 7 ಮಾರ್ಚ್ 2021, 9:39 IST
ಸಿ.ಪಿ.ಯೋಗೇಶ್ವರ್
ಸಿ.ಪಿ.ಯೋಗೇಶ್ವರ್   

ಮೈಸೂರು: ‘ಇದು ಗ್ರಾಫಿಕ್ ಯುಗ. ಆಧುನಿಕ ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಬಹುದು. ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಭಾನುವಾರ ಇಲ್ಲಿ ಹೇಳಿದರು.

ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ತಮ್ಮ ವಿರುದ್ಧ ಮಾನ ಹಾನಿಕರ ಸುದ್ದಿ ಪ್ರಕಟಿಸದಂತೆ ನಿರ್ಬಂಧಿಸಬೇಕೆಂದು ಕೋರಿ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿ, ‘ದೃಶ್ಯಗಳನ್ನು ತಿರುಚುವ, ಧ್ವನಿ ನೀಡುವ ಕೆಲಸ ಸುಲಭವಾಗಿ ಮಾಡಬಹುದು. ಸಿನಿಮಾ ಹಿನ್ನೆಲೆಯಿಂದ ಬಂದಿರುವ ನನಗೆ ಆ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿ ತಾವು ಕೂಡ ಷಡ್ಯಂತ್ರಕ್ಕೆ ಬಲಿಪಶು ಆಗುತ್ತೇವೆ ಎಂಬ ಭಯದಿಂದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ’ ಎಂದರು.

‘ಮಾಧ್ಯಮಗಳಲ್ಲಿ ಬಂದದ್ದನ್ನು ಸಮಾಜ ಒಪ್ಪುತ್ತದೆ. ಸುಳ್ಳುಗಳು ಬಂದರೂ ಜನರು ನಂಬುವರು. ಆದರೆ ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಪೊಲೀಸ್ ತನಿಖೆ, ನ್ಯಾಯಾಲಯದ ವಿಚಾರಣೆ ಬಳಿಕವೇ ಸತ್ಯ ಹೊರಬರುವುದು. ಆದರೆ ಅಷ್ಟೊತ್ತಿಗಾಗಲೇ ಸುಳ್ಳು ಸುದ್ದಿ ಎಲ್ಲ ಕಡೆ ಹರಡಿರುತ್ತದೆ. ಮಾನಹಾನಿಕರ ಸುದ್ದಿ ದಿಢೀರ್‌ ಆಗಿ ಹಬ್ಬಿದರೆ ಮನಸ್ಸಿಗೆ ಘಾಸಿ ಉಂಟಾಗುತ್ತದೆ. ಅದಕ್ಕಾಗಿ ನಾವೆಲ್ಲಾ ಭಯಪಡುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.