ADVERTISEMENT

ಸ್ವ–ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈಜಾಕ್‌ ಮಾಡಲು ಬಿಡಬಾರದು: ನಟ ಚೇತನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2021, 13:36 IST
Last Updated 7 ಸೆಪ್ಟೆಂಬರ್ 2021, 13:36 IST
ನಟ ‘ಆ ದಿನಗಳು’ ಚೇತನ್‌
ನಟ ‘ಆ ದಿನಗಳು’ ಚೇತನ್‌    

ಬೆಂಗಳೂರು:ವೈಯಕ್ತಿಕ ಅಧಿಕಾರಕ್ಕಾಗಿ, ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ–ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು ಎಂದು ನಟ ‘ಆ ದಿನಗಳು’ ಚೇತನ್‌ ಸೋಮವಾರ ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿ ಟ್ವೀಟ್‌ ಮಾಡಿದ್ದ ಚೇತನ್‌, ಅದರ ಬೆನ್ನಿಗೇ ಕನಕದಾಸರ ವಿಷಯ ಪ್ರಸ್ತಾಪಿಸಿ ಗೂಢಾರ್ಥದಲ್ಲಿ ಮಾತಾಡಿದ್ದಾರೆ.

ADVERTISEMENT

‘ಕನಕದಾಸರು 16 ನೇ ಶತಮಾನದಲ್ಲಿ ಜಾತಿರಹಿತ ಮತ್ತು ವರ್ಗರಹಿತ ಸಮಾಜದ ಕನಸು ಕಂಡರು.ವೈಯಕ್ತಿಕ ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸುವ ಸ್ವ–ಸೇವಕ ರಾಜಕಾರಣಿಗಳು ಕನಕನನ್ನು ಹೈಜಾಕ್ ಮಾಡಲು ಬಿಡಬಾರದು.ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಡಿದ ಕನಕದಾಸರು ಜಾತಿ, ಧರ್ಮ, ಲಿಂಗವನ್ನು ಮೀರಿ ನಮ್ಮೆಲ್ಲರಿಗೂ ಸೇರಿದವರು,‘ ಎಂದು ಅವರು ಹೇಳಿದ್ದಾರೆ.

ಚೇತನ್‌ ತಮ್ಮ ಈ ಮಾತುಗಳನ್ನು ಯಾರನ್ನು ಉದ್ದೇಶಿಸಿ ಆಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು

ಕಳೆದ ಶನಿವಾರ ಟ್ವೀಟ್‌ ಮಾಡಿದ್ದ ಚೇತನ್ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದಿದ್ದರು. ‘ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್‌ನ ಪ್ರಬಲ ನಾಯಕ. ಆದರೆ, ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ’ ಎಂದು ಹೇಳಿದ್ದರು.

‘ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ಅವರು ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದ್ದು, ಇತರ ಬಹು ಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತನಾಡುತ್ತಾರೆ’ ಎಂದು ಟೀಕಿಸಿದ್ದರು.

ಇದಕ್ಕೂ ಹಿಂದೆ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರನ್ನೂ ಟ್ವೀಟ್‌ ಮೂಲಕ ಟೀಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.