ADVERTISEMENT

ಪಶ್ಚಿಮ ಕ್ಷೇತ್ರ: ಸಂಕನೂರ ‍ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 22:01 IST
Last Updated 10 ನವೆಂಬರ್ 2020, 22:01 IST
ಸಂಕನೂರ
ಸಂಕನೂರ   

ಧಾರವಾಡ: ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಸ್.ವಿ.ಸಂಕನೂರ ಅವರು 23,857 ಮೊದಲ ಪ್ರಾಶಸ್ತ್ಯದ ಮತ ಪಡೆಯುವ ಮೂಲಕ ಪುನರಾಯ್ಕೆಯಾದರು.

ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆರ್.ಎಂ.ಕುಬೇರಪ್ಪ 12,448 ಮತ ಪಡೆದರು. ಜೆಡಿಎಸ್ ಹಾಗೂ ಇತರ ಸಂಘಟನೆಗಳ ಬೆಂಬಲ ಪಡೆದಿದ್ದ ಪಕ್ಷೇ ತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ 6,188 ಮತ ಪಡೆಯಲು ಮಾತ್ರ ಸಾಧ್ಯವಾಯಿತು. 8,772 ಮತ ಗಳು ತಿರಸ್ಕೃತಗೊಂಡವು. ಸಂಕನೂರ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡರು. ಸಂಜೆ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ಸಂಕನೂರ ಅವರ ಗೆಲುವನ್ನು ಘೋಷಿಸಿದರು. 11 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 52,068 ಮತಗಳು ಚಲಾವಣೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT