ಮಡಿಕೇರಿ: ಎಲ್ಲರೂ ಸಮಾನರು ಎಂಬ ಕಲ್ಪನೆ ತರಲು ಶಾಲಾ - ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಹಿಜಾಬ್, ಟೊಪ್ಪಿ, ಮೊಣಕಾಲು ಕಾಣುವ ತನಕ ಪ್ಯಾಟ್ ಹಾಕುವವರು ಮದರಸಕ್ಕೆ ಹೋಗಲಿ ಎಂದು ಸಂಸದ ಪ್ರತಾಪ ಸಿಂಹ ಇಲ್ಲಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1947ರಲ್ಲೇ ಅಖಂಡ ಭಾರತ ಇಬ್ಭಾಗಿಸಿ ನಿಮಗೇ ಎರಡು ಭಾಗ ನೀಡಲಾಗಿದೆ. ಹಿಜಾಬ್ ಬೇಕು ಎನ್ನುವವರು ಅಲ್ಲಿಗೇ ತೊಲಗಲಿ. ಈ ದೇಶದಲ್ಲಿ ಇದ್ದವರು ನೆಲ, ಜಲ ಹಾಗೂ ಆಚಾರ ವಿಚಾರ ನಂಬಿ ಬದುಕಬೇಕು.
ಗಣೇಶ ಪೂಜೆ, ಶಾರದಾ ಪೂಜೆಯನ್ನು ಪ್ರಶ್ನಿಸಲು ಇದು ಬ್ರಿಟಿಷರ ಭಾರತ ಅಲ್ಲ ಎಂದು ಕಿಡಿಕಾರಿದರು. ಇಲ್ಲಿ ಹಿಂದೂ ಧರ್ಮವೇ ಶ್ರೇಷ್ಠ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.