ADVERTISEMENT

ಸರ್ಕಾರ ಮಾಡುವ ಕೆಲಸಕ್ಕೆ ಜಮೀರ್ ಅಹ್ಮದ್ ಅನುಮತಿ ಯಾಕೆ ಕೇಳಬೇಕು: ಸಿಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 6:16 IST
Last Updated 20 ಏಪ್ರಿಲ್ 2020, 6:16 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಸರ್ಕಾರ ಮಾಡುವ ಕೆಲಸಕ್ಕೆ ಜಮೀರ್ ಅಹ್ಮದ್ ಅನುಮತಿ ಯಾಕೆ ಕೇಳಬೇಕು. ಅವರು ಯಾರು. ಅವರ ಹೇಳಿಕೆ ನೋಡಿದರೆ ಇಂತಹ ಗಲಭೆಗೆ‌ ಅವರೇ ಪ್ರಚೋದನೆ ‌ನೀಡುತ್ತಿದ್ದಾರೆಂದು ಭಾವಿಸಬೇಕೆ? ಎಂದುಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾಡುವ ಕೆಲಸಕ್ಕೆ ಜಮೀರ್ ಅಹ್ಮದ್ ಅನುಮತಿ ಯಾಕೆ ಕೇಳಬೇಕು. ಅವರ ಹೇಳಿಕೆ ನೋಡಿದರೆ ಇಂತಹ ಗಲಭೆಗೆ‌ ಅವರೇ ಪ್ರಚೋದನೆ ‌ನೀಡುತ್ತಿದ್ದಾರೆಂದು ಭಾವಿಸಬೇಕೆ.ರಾಜ್ಯದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಈ ರೀತಿಯ ಗೂಂಡಾ ಪ್ರವೃತ್ತಿ ಸಹಿಸುವ ಪ್ರಶ್ನೆ ‌ಇಲ್ಲ.‌ ಇದರಲ್ಲಿ ಯಾವ ಧರ್ಮ, ಜಾತಿಯ ಪ್ರಶ್ನೆಯಿಲ್ಲ.‌ ಗೂಂಡಾಗಿರಿ ಮಾಡುವವರ ವಿರುದ್ದ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.

ಪಾದರಾಯನಪುರದಲ್ಲಿ ಗೂಂಡಾಗಿರಿ ನಡೆದಿದೆ.‌ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. 54 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಶೀಘ್ರದಲ್ಲೇ ‌ಮತ್ತಷ್ಡು ಕಿಡಿಗೇಡಿಗಳನ್ನು ಬಂಧಿಸಲಾಗುವುದು.ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಕಠಿಣ ‌ಕ್ರಮ‌ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೂಂಡಾಗಿರಿ ಪ್ರವೃತ್ತಿಯನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.