ADVERTISEMENT

ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್ ಪಂದ್ಯಾವಳಿ: 20 ತಂಡಗಳು ಭಾಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 8:24 IST
Last Updated 18 ಫೆಬ್ರುವರಿ 2026, 8:24 IST
<div class="paragraphs"><p>ಧನಲಕ್ಷ್ಮೀ ಪೂಜಾರಿ ಅವರಿಗೆ&nbsp;ಸನ್ಮಾನಿಸಲಾಯಿತು.</p></div>

ಧನಲಕ್ಷ್ಮೀ ಪೂಜಾರಿ ಅವರಿಗೆ ಸನ್ಮಾನಿಸಲಾಯಿತು.

   

ದೋಹಾ: ಬಿಲ್ಲವಾಸ್ ಕತಾರ್ ಸಂಸ್ಥೆಯ ವತಿಯಿಂದ ದೋಹಾದ ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ತ್ರೋಬಾಲ್ ಪಂದ್ಯಾವಳಿಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು.

ಕತಾರ್ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ತ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ADVERTISEMENT

ಈ ಸಂದರ್ಭದಲ್ಲಿ ವಿಶ್ವಕಪ್ ಕಬಡ್ಡಿ 2025 ಚಾಂಪಿಯನ್ ತಂಡದಲ್ಲಿದ್ದ ಧನಲಕ್ಷ್ಮೀ ಪೂಜಾರಿ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಬಿರುವ ಬೊಲ್ಪು’ (ಬಿಲ್ಲವಾಸ್ ನ ಉದಯೋನ್ಮುಖ ತಾರೆ) ಎಂಬ ಬಿರುದು ನೀಡಿ ಎಲ್ಲರ ಸಮ್ಮುಖದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮವನ್ನು ಆರ್‌.ಜೆ. ಅಷ್ಟಮಿ ನಿರೂಪಿಸಿದರು. ಬಿಲ್ಲವಾಸ್ ಕತಾರ್‌ನ ಅಧ್ಯಕ್ಷೆಅಪರ್ಣ ಶರತ್ ಸ್ವಾಗತಿಸಿದರು. ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಹರೀಶ್ ಪಾಂಡೆ ಅವರು ಉದ್ಘಾಟಿಸಿದರು. ಕ್ರೀಡಾ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಫರ್ಹಾನ್ ಅಲ್ ಶೇಖ್ ಅಲ್ ಸಯೀದ್ ಭಾಗವಹಿಸಿದ್ದರು. ಸಮಾರಂಭ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಎಂ. ಪಲ್ಲೊಂಜಿ ಸಂಸ್ಥೆಯ ನಿರ್ದೇಶಕರಾದ ಚಿದಾನಂದ ನಾಯಕ್, ಐ.ಎಸ್‌.ಸಿ ಸಲಹಾ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಐ.ಸಿ.ಸಿ, ಐ.ಸಿ.ಬಿ.ಎಫ್, ಐ.ಎಸ್‌.ಸಿ. ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪಂದ್ಯಾವಳಿಯ ಫಲಿತಾಂಶ:

ಪುರುಷರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಸ್ಟಾರ್ ಸ್ಟ್ರೈಕರ್ಸ್ (ರನ್ನರ್ಸ್-ಅಪ್)

ಮಹಿಳಾ ವಿಭಾಗ: ಎಂಸಿಸಿ (ಚಾಂಪಿಯನ್ಸ್); ತುಳುಕೂಟ 1 (ರನ್ನರ್ಸ್-ಅಪ್); ತುಳುಕೂಟ 2 (ದ್ವಿತೀಯ ರನ್ನರ್ಸ್-ಅಪ್)

ಮಿಶ್ರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಆಲ್ಫಾ ಸ್ಕ್ವಾಡ್ (ರನ್ನರ್ಸ್-ಅಪ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.