
ಪ್ರಜಾವಾಣಿ ವಾರ್ತೆ
ಕನ್ನಡ
ಮಸ್ಕತ್: ಓಮಾನ್‌ನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ಮೂರನೇ 'ವಿಶ್ವ ಕನ್ನಡ ಹಬ್ಬ' ಅದ್ದೂರಿಯಾಗಿ ನಡೆಯಿತು.
ಇಲ್ಲಿ ನೆಲೆಸಿರುವ ಕನ್ನಡಿಗರನ್ನು ಒಟ್ಟುಗೂಡಿಸಿದ ಈ ಕನ್ನಡದ ಹಬ್ಬ ವಿದೇಶಿ ನೆಲದಲ್ಲಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಕುವೈತ್‌ನಲ್ಲಿ ನೆಲೆಸಿರುವ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸುರೇಶ್ ರಾವ್ ನೇರಂಬಳ್ಳಿಯವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಕನ್ನಡಿಗರು ಭಾಗವಹಿಸಿದ್ದರು.
ಕನ್ನಡ ಹಬ್ಬದಲ್ಲಿ ಡಾ. ಸಿ. ಸೋಮಶೇಖರ್, ಷಡಕ್ಷರಿ, ನಟಿ ಸುಧಾರಾಣಿ, ನೆನಪಿರಲಿ ಖ್ಯಾತಿಯ ಪ್ರೇಮ್, ನಾಗೇಂದ್ರ ಪ್ರಸಾದ್, ಸು ಫ್ರಂ ಸೋ ಸಿನಿಮಾ ಖ್ಯಾತಿಯ ರವಿಯಣ್ಣ, ಕಾಂತಾರ ಸಿನಿಮಾ ನಟ ಪ್ರಕಾಶ್ ತೂಮಿನಾಡು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.