ADVERTISEMENT

ಆಫ್ಘಾನಿಸ್ತಾನ: ಬ್ಯಾಂಕ್ ಹೊರಭಾಗದಲ್ಲಿ ಕಾರ್‌ಬಾಂಬ್ ಸ್ಫೋಟ, 34 ಸಾವು

ಏಜೆನ್ಸೀಸ್
Published 22 ಜೂನ್ 2017, 17:50 IST
Last Updated 22 ಜೂನ್ 2017, 17:50 IST
ಆಫ್ಘಾನಿಸ್ತಾನ: ಬ್ಯಾಂಕ್ ಹೊರಭಾಗದಲ್ಲಿ ಕಾರ್‌ಬಾಂಬ್ ಸ್ಫೋಟ, 34 ಸಾವು
ಆಫ್ಘಾನಿಸ್ತಾನ: ಬ್ಯಾಂಕ್ ಹೊರಭಾಗದಲ್ಲಿ ಕಾರ್‌ಬಾಂಬ್ ಸ್ಫೋಟ, 34 ಸಾವು   

ಲಷ್ಕರ್‌ ಗಾಹ್(ಆಫ್ಘಾನಿಸ್ತಾನ): ದಕ್ಷಿಣ ಆಫ್ಘಾನಿಸ್ತಾನದ ಹೆಲ್ಮಾಂಡ್‌ನ ಲಷ್ಕರ್‌ ಘಾ ದಲ್ಲಿರುವ ನ್ಯೂ ಕಾಬೂಲ್ ಬ್ಯಾಂಕ್‌ ಶಾಖೆಯ ಹೊರಭಾಗದಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟದಲ್ಲಿ 34 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರಾಂತೀಯ ಗವರ್ನರ್ ವಕ್ತಾರ ಒಮರ್ ಜವಾಕ್, ‘ಈ ಘಟನೆಯಲ್ಲಿ ಗಾಯಗೊಂಡವರು ಹಾಗೂ ಸಾವನ್ನಪ್ಪಿದವರಲ್ಲಿ ಪೊಲೀಸರು, ನಾಗರಿಕರು, ಸರ್ಕಾರಿ ನೌಕರರು, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸಂಬಳ ಪಡೆಯಲು ಬ್ಯಾಂಕಿಗೆ ಬಂದಿದ್ದ ಸೈನಿಕರು ಕೂಡ ಸೇರಿದ್ದಾರೆ ಎಂದಿದ್ದಾರೆ.

ಈ ಸ್ಫೋಟಕ್ಕೆ ಕಾರಣ ಯಾರು ಎಂಬ ಬಗ್ಗೆ ತಿಳಿದು ಬಂದಿಲ್ಲ. ಕಳೆದ ಬಾರಿ ಬ್ಯಾಂಕ್ ಮೇಲೆ ನಡೆದ ದಾಳಿ ಹೊಣೆಯನ್ನು ತಾಲಿಬಾನ್ ಹಾಗೂ ಐಸಿಸ್ ಸಂಘಟನೆ ಹೊತ್ತುಕೊಂಡಿತ್ತು ಎಂದು ಹೇಳಿದ್ದಾರೆ.

ADVERTISEMENT

ಕಳೆದ ತಿಂಗಳು ಗರ್ಡಜ್‌ ನಗರದಲ್ಲಿನ ಬ್ಯಾಂಕ್ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.