ADVERTISEMENT

ಗುಂಡಿಕ್ಕಿ ರಷ್ಯಾ ರಾಯಭಾರಿ ಹತ್ಯೆ

ಪಿಟಿಐ
Published 19 ಡಿಸೆಂಬರ್ 2016, 20:26 IST
Last Updated 19 ಡಿಸೆಂಬರ್ 2016, 20:26 IST
ಹತ್ಯೆಯಾಗಿರುವ ಆಂಡ್ರ್ಯೂ ಕರ್ಲೋವ್‌ ಅವರ ಪಕ್ಕದಲ್ಲಿ ದಾಳಿಕೋರ   – ರಾಯಿಟರ್ಸ್‌ ಚಿತ್ರ
ಹತ್ಯೆಯಾಗಿರುವ ಆಂಡ್ರ್ಯೂ ಕರ್ಲೋವ್‌ ಅವರ ಪಕ್ಕದಲ್ಲಿ ದಾಳಿಕೋರ – ರಾಯಿಟರ್ಸ್‌ ಚಿತ್ರ   

ಅಂಕಾರಾ (ಟರ್ಕಿ) :  ಅಂಕಾರಕ್ಕೆ ರಷ್ಯಾ ರಾಯಭಾರಿಯಾಗಿರುವ ಆಂಡ್ರ್ಯೂ ಕರ್ಲೋವ್‌ ಅವರನ್ನು ಅಂಗರಕ್ಷಕನೇ ಹತ್ಯೆ ಮಾಡಿರುವ ಘಟನೆ  ಸೋಮವಾರ ರಾತ್ರಿ ನಡೆದಿದೆ. 

ಇಲ್ಲಿನ ಕಲಾ ಗ್ಯಾಲರಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕರ್ಲೋವ್‌ ಮೇಲೆ ಈ ದಾಳಿ ನಡೆದಿದೆ.

ಅಂಗರಕ್ಷಕ ಗುಂಡು ಹಾರಿಸುತ್ತಿದ್ದಂತೆ ‘ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ’ ಎಂದು ಕೂಗಿಕೊಂಡ ಎಂದು ವರದಿಯಾಗಿದೆ.

ADVERTISEMENT

‘ಗಾಯಗೊಂಡಿದ್ದ ಕರ್ಲೋವ್‌ ಅವರು ನಿಧನ ಹೊಂದಿದ್ದಾರೆ. ಇದನ್ನು ನಾವು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿದ್ದೇವೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ತಿಳಿಸಿದ್ದಾರೆ.

ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.