ADVERTISEMENT

ದುಬೈ ಬಸ್‌ ದುರಂತ: ಚಾಲಕನ ತಪ್ಪಿಲ್ಲ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:30 IST
Last Updated 10 ಜುಲೈ 2019, 19:30 IST

ದುಬೈ: ಗಲ್ಫ್‌ ಸಹಕಾರ ಮಂಡಳಿಯ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಎತ್ತರ ತಡೆ ಕಮಾನನ್ನು ನಿರ್ಮಿಸಲಾಗಿದೆ ಎಂದು ಒಮಾನಿ ಬಸ್‌ ಚಾಲಕನ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು ಎಂದು ಗಲ್ಫ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೂನ್‌ 7 ರಂದು ಇಲ್ಲಿ ಸಂಭವಿಸಿದ ಬಸ್‌ ದುರಂತದಲಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದರು. ನಿಷೇಧಿಸಲಾಗಿದ್ದ ರಸ್ತೆಯಲ್ಲಿ ಚಲಿಸಿದ ಬಸ್ಸು, ಕಮಾನಿಗೆ ಹೊಡೆದ ಪರಿಣಾಮ ಬಸ್‌ನ ಎಡ ಭಾಗದಲ್ಲಿ ಕುಳಿತಿದ್ದ ಎಲ್ಲರೂ ಸಾವನ್ನಪ್ಪಿದ್ದರು.

ಸೂಚನಾ ಫಲಕ ಹಾಗೂ ಎತ್ತರ ತಡೆ ಕಮಾನಿನ ಮಧ್ಯೆ ಕೇವಲ 12 ಮೀಟರ್‌ ದೂರವಿತ್ತು. ಆದರೆ, ಇದು 60 ಮೀಟರ್‌ ಇರಬೇಕಾಗಿತ್ತು ಎಂದು ವಕೀಲರು ವಾದಮಂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.