(ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಜುಬಾ: ದಕ್ಷಿಣ ಸುಡಾನ್‌ನ ಗ್ರಾಮವೊಂದರ ಮೇಲೆ ಬಂಡುಕೋರರು ನಡೆಸಿದ ದಾಳಿಯಲ್ಲಿ 169 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅಬೀಮ್ನಾಮ್ ಕೌಂಟಿ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಮೃತಪಟ್ಟವರ ಪೈಕಿ 90 ಮಂದಿ ನಾಗರಿಕರು ಎಂದು ರುವೆಂಗ್‌ನ ಮಾಹಿತಿ ಸಚಿವ ಜೇಮ್ಸ್ ಮೊನ್‌ಯೊಲಾಕ್ ತಿಳಿಸಿದ್ದಾರೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
‘ದಾಳಿಯ ಬಳಿಕ 1,000ಕ್ಕೂ ಹೆಚ್ಚು ಜನರು ಆಶ್ರಯವನ್ನು ಕೇಳಿದ್ದಾರೆ’ ಎಂದು ದಕ್ಷಿಣ ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ಪಡೆ (ಯುಎನ್‌ಎಂಐಎಸ್‌ಎಸ್) ತಿಳಿಸಿದೆ.
ಅಧ್ಯಕ್ಷ ಸಾಲ್ವಾ ಕೀರ್ ಅವರಿಗೆ ವಿಧೇಯರಾಗಿರುವಂತೆ ಸರ್ಕಾರ ಒತ್ತಡ ಹೇರುತ್ತಿರುವ ಕಾರಣ ದಕ್ಷಿಣ ಸುಡಾನ್‌ನಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಶಸ್ತ್ರಸಜ್ಜಿತ ಯುವಕರ ಗುಂಪು ವಿರೋಧ ಪಕ್ಷದ ನಾಯಕ ರೈಕ್ ಮಚರ್ ಅವರ ಪರವಾಗಿ ದಂಗೆ ಏಳುತ್ತಿದೆ. ಮಚರ್ ಅವರು ಕಳೆದ ಸೆಪ್ಟೆಂಬರ್‌ವರೆಗೂ ದೇಶದ ಉಪಾಧ್ಯಕ್ಷರಾಗಿದ್ದರು. ಕ್ರಿಮಿನಲ್ ಆರೋಪ ಕೇಳಿಬಂದ ಬಳಿಕ ಅವರನ್ನು ವಜಾಗೊಳಿಸಲಾಗಿದೆ. ಸದ್ಯ ಅವರು ಗೃಹಬಂಧನದಲ್ಲಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.