ADVERTISEMENT

ವಾಷಿಂಗ್ಟನ್‌: ಕಾರು ಅಪಘಾತದಲ್ಲಿ ಹೈದರಾಬಾದ್‌ ಯುವಕ ಸಾವು

ಪಿಟಿಐ
Published 25 ಜೂನ್ 2019, 11:45 IST
Last Updated 25 ಜೂನ್ 2019, 11:45 IST
ಸೈಯದ್‌ ವಾಸೀಂ ಅಲಿ
ಸೈಯದ್‌ ವಾಸೀಂ ಅಲಿ   

ವಾಷಿಂಗ್ಟನ್‌:ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಹೈದರಬಾದ್‌ ಮೂಲದ ಯುವಕ ಮೃತಪಟ್ಟಿದ್ದಾರೆ.

ಇಲ್ಲಿಯಫ್ರೀಮಂಟ್‍ ನಿವಾಸಿಸೈಯದ್‌ ವಾಸೀಂ ಅಲಿ (26) ಮೃತಪಟ್ಟವರು.ಸೈಯದ್‌ ‘ಲಿಫ್ಟ್‌ ಇಂಕ್‌’ ಕಂಪನಿಯಲ್ಲಿ ಕಾರು ಚಾಲಕರಾಗಿದ್ದರು.

ಕಾರಿನಲ್ಲಿದ್ದ ಪ್ರಯಾಣಿಕರಾದ ಸೆಲಾ ಹೆನ್ರಿಕ್ಯೂಯಿಸ್‌ (49) ಸಹ ಮೃತಪಟ್ಟಿದ್ದಾರೆ.

ADVERTISEMENT

ವೇಗವಾಗಿ ಬಂದಮರ್ಸಿಡಿಸ್‌ ಬೆಂಜ್‌ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಮರ್ಸಿಡಿಸ್ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.ಆತನನ್ನು ಇದುವರೆಗೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಯದ್‌ ಮೃತದೇಹವನ್ನು ಭಾರತಕ್ಕೆ ತರುವ ಸಲುವಾಗಿ ‘ಗೋಫಂಡ್‌ಮಿ’ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ಹಣ ಸಂಗ್ರಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.