ADVERTISEMENT

ಟಿಬೆಟ್ ಕುರಿತ ನೀತಿ ಸಮರ್ಥಿಸಿಕೊಂಡ ಚೀನಾ

ಏಜೆನ್ಸೀಸ್
Published 10 ಮಾರ್ಚ್ 2019, 19:44 IST
Last Updated 10 ಮಾರ್ಚ್ 2019, 19:44 IST
ದಲೈ ಲಾಮಾ
ದಲೈ ಲಾಮಾ   

ಬೀಜಿಂಗ್‌: ಟಿಬೆಟ್ಟನ್ನರ ಧರ್ಮಗುರು ದಲೈ ಲಾಮ ಅವರು ಪಲಾಯನ ಮಾಡಿ 60 ವರ್ಷದ ನಂತರವೂ ಟಿಬೆಟ್‌ ಕುರಿತ ನೀತಿಗಳನ್ನು ಚೀನಾ ಸಮರ್ಥನೆ ಮಾಡಿಕೊಂಡಿದೆ.

ಆರ್ಥಿಕ ಪ್ರಗತಿ, ಜೀವಿತಾವಧಿ ಹೆಚ್ಚಳ ಮತ್ತು ಉತ್ತಮ ಶಿಕ್ಷಣ ಸೌಲಭ್ಯದ ಬಗೆಗಿನ ಟೀಕೆಗಳ ರೀತಿ ಪರಿಸ್ಥಿತಿ ಇಲ್ಲ ಎಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವ್ಹಾ ವರದಿ ಮಾಡಿದೆ.

ಹಿಮಾಲಯದ ಸೆರಗಿನಲ್ಲಿರುವ ಟಿಬೆಟ್‌ನ ಸಂಪನ್ಮೂಲಗಳನ್ನು ಚೀನಾ ತನ್ನ ಲಾಭಕ್ಕಾಗಿ ಶೋಷಿಸುತ್ತಿದೆ ಎಂದು ವಿದೇಶಗಳಲ್ಲಿರುವ ಟಿಬೆಟನ್ನರು ಟೀಕಿಸಿದ್ದಾರೆ. ಟಿಬೆಟ್‌ನ ವಿಶಿಷ್ಟ ಬೌದ್ಧ ಸಂಸ್ಕೃತಿ ಸಹ ನಾಶವಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

‘ಅಭಿವೃದ್ಧಿ ಕುರಿತ ಸುಳ್ಳು ಮಾಹಿತಿ ಮತ್ತು ಅಂಕಿ ಅಂಶಗಳನ್ನೇ ಪುನರಾವರ್ತಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.