ADVERTISEMENT

ಮೆಕ್ಸಿಕೊ| ಕಂದಕಕ್ಕೆ ಬಸ್‌ ಉರುಳಿ 27 ಪ್ರಯಾಣಿಕರು ದುರ್ಮರಣ

ಎಪಿ
Published 6 ಜುಲೈ 2023, 13:25 IST
Last Updated 6 ಜುಲೈ 2023, 13:25 IST
ಕಂದಕಕ್ಕೆ ಉರುಳಿರುವ ಬಸ್‌
ಕಂದಕಕ್ಕೆ ಉರುಳಿರುವ ಬಸ್‌   

ಮೆಕ್ಸಿಕೊ ಸಿಟಿ: ಚಾಲಕನ ನಿಯಂತ್ರದ ತಪ್ಪಿದ ಬಸ್‌ 75 ಅಡಿ ಆಳದ ಕಂದಕಕ್ಕೆ ಉರುಳಿ 27 ಪ್ರಯಾಣಿಕರು ಮೃತಪಟ್ಟಿರುವ ಘಟನೆ ದಕ್ಷಿಣ ಮೆಕ್ಸಿಕೊದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಮಿಶ್ರ್ಟೆಕಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಈ ಬಸ್ ಮೆಕ್ಸಿಕೊ ಸಿಟಿಯಿಂದ ಮಿಶ್ರ್ಟೆಕಾ ಪ್ರದೇಶದ ಹಳ್ಳಿಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. 

‘ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಸ್‌ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ ಒಂದೂವರೆ ವರ್ಷದ ಮಗು ಸೇರಿದಂತೆ 27 ಮಂದಿ ಮೃತಪಟ್ಟಿದ್ದು, 20 ಮಂದಿ  ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭಿರವಾಗಿದೆ’ ಎಂದು ಓಕ್ಸಾಕಾದ ಆಂತರಿಕ ಕಾರ್ಯದರ್ಶಿ ಜೀಸಸ್‌ನ ರೊಮೆರೊ ಮಾಹಿತಿ ನೀಡಿದ್ದಾರೆ.

ADVERTISEMENT

‘ಚಾಲಕನ ಆಯಾಸದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ’ ಎಂದು ರೊಮೆರೊ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.