ADVERTISEMENT

‘ಕೋವಿಡ್‌ ಸಮನ್ವಯಕಾರ’ರ ನೇಮಕ: ರಾನ್‌ ಕ್ಲೈನ್

ಏಜೆನ್ಸೀಸ್
Published 13 ನವೆಂಬರ್ 2020, 7:10 IST
Last Updated 13 ನವೆಂಬರ್ 2020, 7:10 IST
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ಜೊತೆ ಇರುವ ರಾನ್‌ ಕ್ಲೈನ್
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ಜೊತೆ ಇರುವ ರಾನ್‌ ಕ್ಲೈನ್   

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ‘ಕೋವಿಡ್‌ ಸಮನ್ವಯಕಾರ’ರನ್ನು ನೇಮಿಸಲಿದ್ದಾರೆ. ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯವನ್ನು ಇವರು ಮುನ್ನಡೆಸಲಿದ್ದಾರೆ ಎಂದು ಶ್ವೇತಭವನದ ನೂತನ ಸಿಬ್ಬಂದಿ ಮುಖ್ಯಸ್ಥ ರಾನ್‌ ಕ್ಲೈನ್ ಅವರು ಮಾಹಿತಿ ನೀಡಿದರು.

ಅಧ್ಯಕ್ಷ ಬೈಡನ್‌ ಅವರೊಂದಿಗೆ ಕೋವಿಡ್‌ ಸಮನ್ವಯಕಾರ ನೇರ ಸಂಪರ್ಕವನ್ನು ಹೊಂದಿರುತ್ತಾರೆ. ಅವರು ಸಾಂಕ್ರಾಮಿಕ ರೋಗದ ಬಗ್ಗೆ ಅಧ್ಯಕ್ಷರಿಗೆ ಪ್ರತಿನಿತ್ಯ ಮಾಹಿತಿ ನೀಡಲಿದ್ದಾರೆ. ಕೋವಿಡ್‌ ಸಮನ್ವಯಕಾರರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗುತ್ತದೆ. ಈ ತಂಡವು ಲಸಿಕೆ ವಿತರಣೆ, ಪೂರೈಕೆ ಸರಪಳಿಯ ತೊಡಕು ನಿವಾರಣೆ, ಪರೀಕ್ಷೆ ವಿಧಾನದಲ್ಲಿ ಸುಧಾರಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಕೆಲಸ ಮಾಡಲಿದೆ.

2014 ರಲ್ಲಿ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರ ಆಡಳಿತಾವಧಿಯಲ್ಲಿಯೂ ರಾನ್‌ ಕ್ಲೈನ್ ಅವರು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.