ADVERTISEMENT

ಏಡ್ಸ್: 2.17 ಕೋಟಿ ಜನರಿಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 18:32 IST
Last Updated 18 ಜುಲೈ 2018, 18:32 IST

ಪ್ಯಾರಿಸ್ (ಎಎಫ್‌ಪಿ): 2017ರಲ್ಲಿ ಏಡ್ಸ್‌ಗೆ ಗುರಿಯಾಗಿದ್ದ ವಿಶ್ವದ 3.6 ಕೋಟಿ ಜನರಲ್ಲಿ 2.17 ಕೋಟಿ ಮಂದಿ, ಏಡ್ಸ್‌ ವೈರಸ್‌ ನಿಯಂತ್ರಿಸುವ ಚಿಕಿತ್ಸೆ ಪಡೆದುಕೊಂಡಿದ್ದಾರೆ.

1980ರಲ್ಲಿ ಮೊದಲ ಬಾರಿಗೆ ಏಡ್ಸ್‌ ಪತ್ತೆಯಾದ ಬಳಿಕದಲ್ಲಿಯೇ, ದಾಖಲೆ ಪ್ರಮಾಣದಲ್ಲಿ ಪಡೆದುಕೊಂಡಿರುವ ಚಿಕಿತ್ಸೆ ಇದಾಗಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಹೊಸದಾಗಿ ಏಡ್ಸ್ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಹಾಗೂ ಸಾವಿನ ಸಂಖ್ಯೆಗೆ ಕಡಿವಾಣ ಹಾಕುವುದರಲ್ಲಿ ಪ್ರಗತಿ ಸಾಧಿಸಿರುವುದನ್ನು ವರದಿಯಲ್ಲಿ ಪ್ರಶಂಸಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.