ADVERTISEMENT

ಇಸ್ರೇಲ್ ಸೇನೆಯ ಸ್ನೈಪರ್‌ ದಾಳಿಗೆ ಅರಬ್ ದೇಶಗಳ ಜನಪ್ರಿಯ ಪತ್ರಕರ್ತೆ ಸಾವು

ಏಜೆನ್ಸೀಸ್
Published 11 ಮೇ 2022, 5:32 IST
Last Updated 11 ಮೇ 2022, 5:32 IST
ಶಿರೀನ್ ಅಬು ಆಕ್‌ಲೇಹಾ
ಶಿರೀನ್ ಅಬು ಆಕ್‌ಲೇಹಾ   

ಜೆನಿನ್ (ಪ್ಯಾಲೇಸ್ಟೀನ್): ಆಲ್ ಜಜೀರಾ ವಾಹಿನಿಯ ಹಿರಿಯ ಪತ್ರಕರ್ತೆ ಶಿರೀನ್ ಅಬು ಆಕ್‌ಲೇಹಾ ಅವರನ್ನು ಇಸ್ರೇಲ್ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.

ಪ್ಯಾಲೇಸ್ತೇನಿಯನ್‌ನ ವೆಸ್ಟ್‌ ಬ್ಯಾಂಕ್‌ನಲ್ಲಿ ನಿರಾಶ್ರಿತರ ಬಗ್ಗೆ ವರದಿ ಮಾಡಲುಶಿರೀನ್ ತೆರಳಿದ್ದ ಸಂದರ್ಭದಲ್ಲಿ ಇಸ್ರೇಲ್ ಸೇನೆಯ ಸ್ನೈಪರ್‌ಗಳು ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಎಎಫ್‌ಪಿ ಫೋಟೊಗ್ರಾಫರ್ ತಿಳಿಸಿದ್ದಾರೆ.

ಆಲ್ ಜಜೀರಾ ವಾಹಿನಿ ಹಾಗೂ ಪ್ಯಾಲೇಸ್ಟೀನ್ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿದೆ.

ADVERTISEMENT

ಶಿರೀನ್ ಅವರು ಅರಬ್‌ ದೇಶಗಳಲ್ಲಿ ಜನಪ್ರಿಯ ಪತ್ರಕರ್ತರಾಗಿದ್ದರು. ಅವರ ನಿಧನದ ಬಗ್ಗೆ ಇಸ್ರೇಲ್ ಆರ್ಮಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.