ADVERTISEMENT

ಕೋವಿಡ್ ಹೆಚ್ಚಳ: ಭಾರತ, ಪಾಕಿಸ್ತಾನ, ಮಾಲ್ಡೀವ್ಸ್‌ಗೆ ಪ್ರಯಾಣಿಸದಂತೆ ಅಮೆರಿಕ ಸಲಹೆ

ಪಿಟಿಐ
Published 23 ಏಪ್ರಿಲ್ 2021, 6:39 IST
Last Updated 23 ಏಪ್ರಿಲ್ 2021, 6:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ‘ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರುತ್ತಿರುವ ಕಾರಣ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಬೇಡಿ’ ಎಂದು ಅಮೆರಿಕವು ತನ್ನ ನಾಗರಿಕರಿಗೆ ಸಲಹೆ ನೀಡಿದೆ.

‘ಚೀನಾ ಮತ್ತು ನೇಪಾಳಕ್ಕೂ ಪ್ರಯಾಣಿಸುವ ಬಗ್ಗೆ ಮರುಚಿಂತನೆ ಮಾಡಿ, ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ ಮತ್ತು ಭೂತಾನ್‌ಗೆ ಪ್ರಯಾಣಿಸುವಾಗ ಸಾಮಾನ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ’ ಎಂದು ಅಮೆರಿಕವು ಗುರುವಾರ ಬಿಡುಗಡೆ ಮಾಡಿದ ಸರಣಿ ಪ್ರಯಾಣ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಭಾರತ, ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ ಅನ್ನು ನಾಲ್ಕನೇ ಹಂತದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ಅಮೆರಿಕವು ನಾಗರಿಕರಿಗೆ ಸೂಚಿಸಿದೆ.

ADVERTISEMENT

‘ಭಾರತದಲ್ಲಿ ಕೋವಿಡ್‌, ಅಪರಾಧಗಳು ಮತ್ತು ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಬೇಡಿ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ಹೇಳಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಕೂಡ ಇದೇ ರೀತಿಯ ಎಚ್ಚರಿಕೆಯನ್ನು ನೀಡಿತ್ತು.

‘ಪಾಕಿಸ್ತಾನದಲ್ಲಿ ಕೋವಿಡ್‌ ಪ್ರಕರಣಗಳು, ಭಯೋತ್ಪಾದನೆ, ಹಿಂಸಾಚಾರ ಹೆಚ್ಚಾಗುತ್ತಿವೆ. ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ದಾಳಿಗಳನ್ನು ನಡೆಸುತ್ತಿವೆ. ಹಾಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಬೇಡಿ’ ಎಂದು ಸಲಹೆ ನೀಡಲಾಗಿದೆ.‌

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.