ADVERTISEMENT

ಜಪಾನ್‌: ಜನನ ಪ್ರಮಾಣ ತೀವ್ರ ಕುಸಿತ

ಏಜೆನ್ಸೀಸ್
Published 5 ಜೂನ್ 2025, 13:50 IST
Last Updated 5 ಜೂನ್ 2025, 13:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಟೋಕಿಯೊ: ಜಪಾನ್‌ನಲ್ಲಿ ಜನನ ಪ್ರಮಾಣವು ನಿರೀಕ್ಷೆಗಿಂತ ವೇಗವಾಗಿ ಕುಸಿಯುತ್ತಿದೆ. ಕಳೆದ ವರ್ಷದ ವಾರ್ಷಿಕ ಜನನ ಪ್ರಮಾಣವು ಕನಿಷ್ಠ ಮಟ್ಟವನ್ನು ದಾಖಲಿಸಿದೆ ಎಂದು ಬುಧವಾರ ಸರ್ಕಾರ‌ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

2024ರಲ್ಲಿ ದೇಶದಲ್ಲಿ 6,86,061 ಶಿಶುಗಳು ಜನಿಸಿವೆ. 2023ಕ್ಕೆ ಹೋಲಿಸಿದರೆ ಜನನ ಪ್ರಮಾಣ ಶೇಕಡ 5.7ರಷ್ಟು ಕುಸಿತವಾಗಿದೆ. 1899ರ ಬಳಿಕ ಇದೇ ಮೊದಲಿಗೆ ವರ್ಷವೊಂದರಲ್ಲಿ 7 ಲಕ್ಷಕ್ಕಿಂತ ಕಡಿಮೆ ಶಿಶುಗಳು ಜನಿಸಿವೆ. ಇದರೊಂದಿಗೆ ಸತತ 16ನೇ ವರ್ಷವೂ ಜನನ ಪ್ರಮಾಣ ಕುಸಿತ ಮುಂದುವರಿದಿದೆ. ಕುಸಿಯುತ್ತಿರುವ ಜನನ ಪ್ರಮಾಣ ಮತ್ತು ಹೆಚ್ಚು ವೃದ್ಧರ ಸಂಖ್ಯೆ ಇರುವ ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಜ‌ಪಾನ್‌ ‌‌ಕೂಡ ಒಂದಾಗಿದೆ. 

ADVERTISEMENT

‌ಪರಿಸ್ಥಿತಿ ಕುರಿತು ಪ್ರಧಾನಿ ಶಿಗೆರು ಇಶಿಬಾ ಕಳವಳ ವ್ಯಕ್ತಪಡಿಸಿದ್ದಾರೆ. ‘ಕೆಲಸ ಮತ್ತು ಮಕ್ಕಳ ಪಾಲನೆಯನ್ನು ಸರಿದೂಗಿಸಲು ವಿವಾಹಿತರಿಗೆ ಅನುಕೂಲ‌ವಾಗುವಂತೆ ಕೆಲಸದ ವಾತಾ‌ವರಣ ಸೃಷ್ಟಿಸಲು ಕ್ರಮ ಕೈಗೊಳ್ಳಲಾ‌ಗುವುದು’ ಎಂದು ಹೇಳಿದ್ದಾರೆ. 

ಜಪಾನ್‌ನಲ್ಲಿ ಸದ್ಯ 12.40 ಕೋಟಿ ಜನಸಂಖ್ಯೆ ಇದ್ದು, 2070ರ ವೇಳೆಗೆ ಅದು 8.7 ಕೋಟಿಗೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.