ADVERTISEMENT

ಬ್ರಿಸ್ಬೇನ್‌: ಖಾಲಿಸ್ತಾನ್‌ ಬೆಂಬಲಿಗರಿಂದ ಹಿಂದೂ ದೇವಸ್ಥಾನ ಧ್ವಂಸ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 13:40 IST
Last Updated 4 ಮಾರ್ಚ್ 2023, 13:40 IST
ಬ್ರಿಸ್ಬೇನ್‌ನಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನ –ಪಿಟಿಐ ಚಿತ್ರ
ಬ್ರಿಸ್ಬೇನ್‌ನಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನ –ಪಿಟಿಐ ಚಿತ್ರ   

ಮೆಲ್ಬರ್ನ್ (‍ಪಿಟಿಐ): ಬ್ರಿಸ್ಬೇನ್‌ನಲ್ಲಿರುವ ಪ್ರಮುಖ ಹಿಂದೂ ದೇವಾಲಯವೊಂದರ ಮೇಲೆ ಶನಿವಾರ ಖಾಲಿಸ್ತಾನ್ ಪರ ಬೆಂಬಲಿಗರು ದಾಳಿ ನಡೆಸಿ, ಧ್ವಂಸ ಮಾಡಿದ್ದಾರೆ.

ಬ್ರಿಸ್ಬೇನ್‌ನ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಈ ಕೃತ್ಯ ನಡೆದಿದೆ. ಎರಡು ತಿಂಗಳ ಅವಧಿಯಲ್ಲಿ ಹಿಂದೂ ದೇವಸ್ಥಾನಗಳನ್ನು ಗುರಿಯಾಗಿಸಿ ನಡೆದ ನಾಲ್ಕನೇ ವಿಧ್ವಂಸಕ ಕೃತ್ಯ ಇದಾಗಿದೆ.

‘ದೇವಸ್ಥಾನದ ಪುರೋಹಿತರು ಮತ್ತು ಭಕ್ತರು ಕರೆ ಮಾಡಿ ದೇಗುಲದ ಆವರಣಗೋಡೆ ಧ್ವಂಸಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಅವರ ಹೇಳಿಕೆ ಉಲ್ಲೇಖಿಸಿ ‘ಆಸ್ಟ್ರೇಲಿಯಾ ಟುಡೆ’ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಗೇಟ್ಸ್, ಈ ಘಟನೆಯು ಆಸ್ಟ್ರೇಲಿಯಾದ ಹಿಂದೂಗಳನ್ನು ಭಯಭೀತಗೊಳಿಸುವ ಪ್ರಯತ್ನವಾಗಿದೆ ಎಂದು ದೂರಿದ್ದಾರೆ.

‘ಜಗತ್ತಿನ ವಿವಿಧೆಡೆ ಎಸಗಿರುವ ಕೃತ್ಯಗಳಂತೆ ಸಿಖ್ಸ್ ಫಾರ್‌ ಜಸ್ಟಿಸ್ ಸಂಘಟನೆ ಈ ಕೃತ್ಯ ಎಸಗಿದೆ. ಅಪಪ್ರಚಾರ, ಸಾಮಾಜಿಕ ಮಾಧ್ಯಮಗಳ ಮೂಲಕ ಅವಹೇಳನ, ಬೆದರಿಕೆ ಒಡ್ಡುವಂತಹ ಕೃತ್ಯಗಳನ್ನು ನಡೆಸುತ್ತಿದೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.