ಕೀವ್: ಉಕ್ರೇನ್‌ನ ಪ್ರಮುಖ ನಗರ ಕ್ರೆಮೆನ್ಚುಕ್‌ನಲ್ಲಿರುವ ಜನನಿಬಿಡ ಮಾಲ್‌ವೊಂದರ ಮೇಲೆ ರಷ್ಯಾ ಸೇನೆ ಸೋಮವಾರ ಸಂಜೆ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆ ವಿಭಾಗದ ಮುಖ್ಯಸ್ಥರು ಮಂಗಳವಾರ ಮುಂಜಾನೆ ತಿಳಿಸಿದ್ದಾರೆ. ಇದರಿಂದಾಗಿ ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ.
'ಕ್ರೆಮೆನ್ಚುಕ್‌ನ ಶಾಪಿಂಗ್ ಸೆಂಟರ್ ಮೇಲೆ ರಷ್ಯಾ ನಡೆಸಿದ ಈ ದಾಳಿಯು ಯುರೋಪ್ ಇತಿಹಾಸದಲ್ಲಿಯೇ ಅತ್ಯಂತ ಲಜ್ಜೆಗೇಡಿ ಉಗ್ರಕೃತ್ಯಗಳಲ್ಲಿ ಒಂದಾಗಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಟೆಲಿಗ್ರಾಂ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
'ನಮಗೆ ತಿಳಿದಂತೆ ಇಲ್ಲಿಯವರೆಗೆ 16 ಮಂದಿ ಮೃತಪಟ್ಟಿದ್ದು, 59 ಜನರು ಗಾಯಗೊಂಡಿದ್ದಾರೆ. 25ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ' ಎಂದುತುರ್ತು ಸೇವೆಗಳ ವಿಭಾಗದ ಮುಖ್ಯಸ್ಥ ಸೆರ್ಗಿ ಕ್ರುಕ್ ಮಾಹಿತಿ ನೀಡಿದ್ದಾರೆ.
2.2 ಲಕ್ಷ ಜನಸಂಖ್ಯೆ ಇರುವ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದಾಗಮಾಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರು ಇದ್ದರು ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. 'ಮಾಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ರಕ್ಷಣೆ ಮಾಡುವವರು ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಸಂತ್ರಸ್ತರ ಸಂಖ್ಯೆಯನ್ನು ಊಹಿಸುವುದೂ ಅಸಾಧ್ಯ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಮಾಲ್ ಹೊತ್ತಿಉರಿಯುತ್ತಿರುವ ವಿಡಿಯೊವನ್ನೂ ಝೆಲೆನ್‌ಸ್ಕಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.