ADVERTISEMENT

ಕಪ್ಪು ವರ್ಣೀಯ ವ್ಯಕ್ತಿಯ ಹತ್ಯೆ: ಪ್ರತಿಮೆಗಳೇ ಪ್ರತಿಭಟನಕಾರರ ಹೊಸ ಗುರಿ

ಏಜೆನ್ಸೀಸ್
Published 15 ಜೂನ್ 2020, 13:40 IST
Last Updated 15 ಜೂನ್ 2020, 13:40 IST
ರೇಶರ್ಡ್‌ ಬ್ರೂಕ್ಸ್‌ ಹತ್ಯೆ ಖಂಡಿಸಿ ಅಟ್ಲಾಂಟಾದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ರೇಶರ್ಡ್‌ ಬ್ರೂಕ್ಸ್‌ ಹತ್ಯೆ ಖಂಡಿಸಿ ಅಟ್ಲಾಂಟಾದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಟ್ಲಾಂಟಾದಲ್ಲಿ ಕಪ್ಪು ವರ್ಣೀಯ ರೇಶರ್ಡ್‌ ಬ್ರೂಕ್ಸ್‌ ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ವರ್ಣಭೇದ ನೀತಿಯ ವಿರುದ್ಧ ಅಮೆರಿಕದಾದ್ಯಂತ ಮತ್ತೆ ಪ್ರತಿಭಟನೆಯ ಅಲೆ ಎದ್ದಿದೆ.

ಪ್ರತಿಭಟನಕಾರರು ಪ್ರತಿಮೆಗಳನ್ನು ಗುರಿಯಾಗಿಸಿ ಹಾನಿಯನ್ನುಂಟು ಮಾಡುತ್ತಿದ್ದಾರೆ. ಫಿಲಡೆಲ್ಫಿಯಾದ ಕ್ರಿಸ್ಟೋಫರ್‌ ಕೊಲಂಬಸ್‌ ಪ್ರತಿಮೆಯ ಬಳಿ ಬಂದೂಕು ಹಾಗೂ ಬ್ಯಾಟ್‌ ಹಿಡಿದುಕೊಂಡು 100ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದ್ದಾರೆ. ರೇಶರ್ಡ್‌ ಬ್ರೂಕ್ಸ್‌ ಹತ್ಯೆಗೀಡಾದ ರೆಸ್ಟೋರೆಂಟ್‌ ಮುಂಭಾಗದಲ್ಲೂ ಜನರು ಪ್ರತಿಭಟನೆ ನಡೆಸಿದ್ದಾರೆ.

ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ನಲ್ಲಿ ಕ್ರಿಸ್ಟೋಫರ್‌ ಕೊಲಂಬಸ್‌ ಪ್ರತಿಮೆಗೆ ಹಾನಿಯೆಸಗಿದ ಆರೋಪದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ರೇಶರ್ಡ್‌ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಅಧಿಕಾರಿ ಗ್ಯಾರೆಟ್‌ ರೋಲ್ಫ್‌ ಎಂಬಾತನನ್ನು ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.