ADVERTISEMENT

ಲೇಖಕಿ ಬಾಪ್ಸಿ ಸಿಧ್ವಾ ನಿಧನ

ಪಿಟಿಐ
Published 26 ಡಿಸೆಂಬರ್ 2024, 12:56 IST
Last Updated 26 ಡಿಸೆಂಬರ್ 2024, 12:56 IST
ಬಾಪ್ಸಿ ಸಿಧ್ವಾ  –ಫೇಸ್‌ಬುಕ್‌ ಚಿತ್ರ
ಬಾಪ್ಸಿ ಸಿಧ್ವಾ  –ಫೇಸ್‌ಬುಕ್‌ ಚಿತ್ರ   

ಹೂಸ್ಟನ್‌ (ಅಮೆರಿಕ): ಪಾಕಿಸ್ತಾನ ಮೂಲದ ಪ್ರಸಿದ್ಧ ಕಾದಂಬರಿಗಾರ್ತಿ ಮತ್ತು ಲೇಖಕಿ ಬಾಪ್ಸಿ ಸಿಧ್ವಾ(86) ಅವರು ಅಮೆರಿಕದ ಹ್ಯೂಸ್ಟನ್‌ನಲ್ಲಿ ಬುಧವಾರ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.

‘ಮೃತರ ಸ್ಮರಣಾರ್ಥ ಮೂರು ದಿನ ಕಾರ್ಯಕ್ರಮಗಳನ್ನು ನಡೆಸಿ ನಂತರ ಹ್ಯೂಸ್ಟನ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು’ ಎಂದು ಸಿಧ್ವಾ ಸಹೋದರ ಫಿರೋಜ್ ಭಂಡಾರ ತಿಳಿಸಿದ್ದಾರೆ.

ಸಿಧ್ವಾ ಅವರು ‘ಐಸ್‌ ಕ್ಯಾಂಡಿ ಮ್ಯಾನ್‌’ ಕಾದಂಬರಿಯ ಮೂಲಕ ಮನ್ನಣೆ ಗಳಿಸಿದ್ದರು. ಇದೇ ಕಾದಂಬರಿಯನ್ನು ಆಧರಿಸಿ ಭಾರತ ಮೂಲದ, ಕೆನಡಾ ನಿರ್ದೇಶಕಿ ದೀಪಾ ಮೆಹ್ತಾ ಅವರು ‘ಅರ್ತ್’ ಸಿನಿಮಾ ನಿರ್ದೇಶಿಸಿದ್ದರು. ‘ವಾಟರ್’ ಹೆಸರಿನ ಕಾದಂಬರಿ ಆಧರಿಸಿದ ಚಿತ್ರವನ್ನು ಕೂಡ ಅದೇ ಹೆಸರಿನಲ್ಲಿ ನಿರ್ದೇಶಿಸಿದ್ದರು. ‘ದಿ ಕ್ರೌ ಈಟರ್ಸ್’, ‘ಕ್ರ್ಯಾಕಿಂಗ್ ಇಂಡಿಯಾ’, ‘ಆ್ಯನ್ ಅಮೆರಿಕನ್ ಬ್ರಾಟ್’, ‘ದಿ ಪಾಕಿಸ್ತಾನಿ ಬ್ರೈಡ್’ ಸೇರಿದಂತೆ ಹಲವಾರು ಕಾದಂಬರಿಗಳನ್ನು ಬಾಪ್ಸಿ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.