ಬಾಂಬ್ ಸ್ಫೋಟವಾದ ಸ್ಥಳ ಹಾಗೂ ಆರೋಪಿ ಎಡ್ವರ್ಡ್ ಬಾರ್ಟ್ಕಸ್
ಪಾಮ್ ಸ್ಪ್ರಿಂಗ್ಸ್, ಕ್ಯಾಲಿಪೊರ್ನಿಯಾ: ಅಮೆರಿಕದ ಕ್ಯಾಲಿಪೊರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಬಳಿಯ ಪಾಮ್ ಸ್ಪ್ರಿಂಗ್ಸ್ ನಗರದಲ್ಲಿನ ಹೆರಿಗೆ ಆಸ್ಪತ್ರೆಯೊಂದರಲ್ಲಿ ಬಾಂಬ್ ಸ್ಪೋಟಿಸಿದ್ದ ಆರೋಪಿಯ ಗುರುತು ಪತ್ತೆಯಾಗಿದೆ.
ಬಾಂಬ್ ಸ್ಪೋಟಿಸಿದವನನ್ನು ಲಾಸ್ ಏಂಜಲೀಸ್‌ನ ಗೈ ಎಡ್ವರ್ಡ್ ಬಾರ್ಟ್ಕಸ್ (31) ಎಂದು ಗುರುತಿಸಲಾಗಿದೆ ಎಂದು ಎಫ್‌ಬಿಐ ಹೇಳಿದೆ.
ಶನಿವಾರ ಪಾಮ್ ಸ್ಪ್ರಿಂಗ್ಸ್‌ನ ಉತ್ತರ ಭಾಗದ ಖಾಸಗಿ ಒಂದಸ್ತಿನ ಹೆರಿಗೆ ಆಸ್ಪತ್ರೆಯ ಒಪಿಡಿ ಪ್ರದೇಶದಲ್ಲಿ ಬಾಂಬ್ ಸ್ಪೋಟವಾಗಿತ್ತು. ಪರಿಣಾಮವಾಗಿ ಒಬ್ಬ ವ್ಯಕ್ತಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಎಫ್‌ಬಿಐನ ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಬಗ್ಗೆ ವಿಚಿತ್ರ ಸತ್ಯಗಳು ಬಯಲಾಗಿವೆ. ಆರೋಪಿ ಎಡ್ವರ್ಡ್ ಬಾರ್ಟ್ಕಸ್ ನಿರಾಶಾವಾಧಿಯಾಗಿದ್ದ. ಈತ ‘ಈ ಜಗತ್ತು ಜನಸಂಖ್ಯೆಯಿಂದ ತುಂಬಿರಬಾರದು. ಅದರಿಂದಲೇ ಎಲ್ಲ ಸಮಸ್ಯೆ’ ಎಂದು ಆಡಿಯೊ ಹೇಳಿಕೆಯನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ. ಆಡಿಯೊ ಹೇಳಿಕೆಯಲ್ಲಿ ಜೀವವಿರೋಧಿ ಅಂಶಗಳು ಎದ್ದುಕಾಣುತ್ತವೆ ಎಂದು ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಬಿಐ ಇದೊಂದು ಉಗ್ರ ಕೃತ್ಯ ಎಂದು ಘೋಷಿಸಿದೆ. ಆರೋಪಿಯ ಬಂಧನಕ್ಕೆ ಬಲೆ ಬೀಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.