ADVERTISEMENT

ಪೆಟ್ರೋಲ್‌ಗೆ ಸರದಿಯಲ್ಲಿ ನಿಂತಿದ್ದ ಆಟೊ ಚಾಲಕ ಸಾವು

ಪಿಟಿಐ
Published 19 ಜೂನ್ 2022, 3:14 IST
Last Updated 19 ಜೂನ್ 2022, 3:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ಇಂಧನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದು, ಕೊಲಂಬೊದ ಪಾನದುರಾ ಪ್ರದೇಶದಲ್ಲಿ ಪೆಟ್ರೋಲ್‌ಗಾಗಿ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತಿದ್ದ 53 ವರ್ಷದ ಆಟೊ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸದ್ಯ ಶ್ರೀಲಂಕಾದಲ್ಲಿ ಬಹುತೇಕ ಡೀಸೆಲ್‌ ಬಂಕ್‌ಗಳಲ್ಲಿ ಇಂಧನ ಖಾಲಿಯಾಗಿದೆ. ಪೆಟ್ರೋಲ್‌ ಸರಬರಾಜಿಗೆ ಬಹು ದೊಡ್ಡ ಸರತಿಯಿದ್ದು, ತಮ್ಮ ವಾಹನಗಳಿಗೆ ಪೆಟ್ರೋಲ್‌ ತುಂಬಿಸಿಕೊಳ್ಳಲು ಜನರು ಸರದಿಯಲ್ಲಿ ಹಲವು ಗಂಟೆಗಳ ಕಾಲ ನಿಲ್ಲುವುದು ಅನಿವಾರ್ಯವಾಗಿದೆ.

64 ವರ್ಷದ ಮತ್ತೊಬ್ಬ ವೃದ್ಧ ಸಹಪುಗೊಡಾದಲ್ಲಿ ಅಡುಗೆ ಅನಿಲಕ್ಕಾಗಿ ಸರತಿಯಲ್ಲಿ ನಿಂತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.