ADVERTISEMENT

ಅಲ್ಲಾಹನ ಪ್ರತಿಜ್ಞೆ ಪೂರ್ಣಗೊಂಡಿದೆ; ಖಮೇನಿ ಕೊನೆಯ ಪೋಸ್ಟ್‌ನಲ್ಲಿ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2026, 9:43 IST
Last Updated 1 ಮಾರ್ಚ್ 2026, 9:43 IST
ಆಯತುಲ್ಲಾ ಅಲಿ ಖಮೇನಿ
ಆಯತುಲ್ಲಾ ಅಲಿ ಖಮೇನಿ   

ಟೆಹರಾನ್: 1989ರಿಂದ ಇರಾನ್‌ನ ಪರಮೋಚ್ಚ ನಾಯಕನಾಗಿದ್ದ, ಪಾಶ್ಚಿಮಾತ್ಯ ರಾಷ್ಟ್ರಗಳ ಕಟು ವಿರೋಧಿಯಾಗಿದ್ದ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಈ ನಡುವೆ ಅವರ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

‌ಅಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕುರ್‌ಆನ್ 33:23 (ಸೂರತ್ ಅಲ್-ಅಹ್ಜಾಬ್) ಶ್ಲೋಕವನ್ನು ಉಲ್ಲೇಖಿಸಲಾಗಿದೆ.

ಖಮೇನಿ ಪೋಸ್ಟ್‌ನಲ್ಲಿ ಏನಿದೆ?

ADVERTISEMENT

‘ಅತ್ಯಂತ ಕರುಣಾಮಯನಾದ, ದಯಾಮಯನಾದ ಅಲ್ಲಾಹನ ಹೆಸರಿನಲ್ಲಿ, ನಂಬಿಕೆಗೆ ಅರ್ಹರಾದ ಕೆಲವು ವಿಶ್ವಾಸಿ ಪುರುಷರಿದ್ದಾರೆ. ಅವರು ಅಲ್ಲಾಹನಿಗೆ ಕೊಟ್ಟ ಮಾತನ್ನು ಪೂರ್ಣವಾಗಿ ನಿರ್ವಹಿಸಿದ್ದಾರೆ. ಇನ್ನೂ ಕೆಲವರು ಅದನ್ನು ನಿರೀಕ್ಷಿಸುತ್ತಿದ್ದಾರೆ. ಅವರು ಯಾವುದೇ ರೀತಿಯಲ್ಲೂ ಕೊಟ್ಟ ಮಾತಿನಿಂದ ಹಿಂದೆ ಸರಿಯಲಿಲ್ಲ’ ಎಂದು ಬರೆಯಲಾಗಿದೆ.

ಅಯತೊಲ್ಲಾ ಅಲಿ ಖಮೇನಿ ಅವರು 1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದು, ಮಿಲಿಟರಿ ನಿರ್ಧಾರ, ಹಿರಿಯ ಅಧಿಕಾರಿಗಳ ನೇಮಕಾತಿ ಸೇರಿದಂತೆ ದೇಶದ ಪ್ರಮುಖ ನಿರ್ಧಾರಗಳ ಮೇಲೆ ಅವರು ಹಿಡಿತ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.