
ಸಾವು (ಪ್ರಾತಿನಿಧಿಕ ಚಿತ್ರ)
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದವರಿದಿದ್ದು, ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ದುಷ್ಕರ್ಮಿಗಳು ಥಳಿಸಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ರಾತ್ರಿ ಚಿತ್ತಗಾಂಗ್‌ನ ದಗನ್‌ಭುಯಾನ್‌ನಲ್ಲಿ ನಡೆದ ದಾಳಿಯಲ್ಲಿ ಆಟೊ ರಿಕ್ಷಾ ಚಾಲಕ 28 ವರ್ಷದ ಸಮೀರ್ ದಾಸ್ ಮೃತಪಟ್ಟಿದ್ದಾರೆ.
ದಾಳಿಕೋರರು ದಾಸ್ ಅವರನ್ನು ಥಳಿಸಿ, ಚೂರಿಯಿಂದ ಇರಿದು ಕೊಂದಿದ್ದಾರೆ. ಆ ಬಳಿಕ ಬ್ಯಾಟರಿ ಚಾಲಿತ ಆಟೊ ರಿಕ್ಷಾದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
‘ಸಮೀರ್‌ನನ್ನು ಹರಿತವಾದ ಆಯುಧಗಳಿಂದ ಹೊಡೆದು ಸಾಯಿಸಲಾಗಿದೆ. ಮೇಲ್ನೋಟಕ್ಕೆ ಇದು ಪೂರ್ವಯೋಜಿತ ಕೃತ್ಯದಂತೆ ಕಾಣುತ್ತದೆ. ಕೊಲೆಯ ನಂತರ ದುಷ್ಕರ್ಮಿಗಳು ಆಟೊ ರಿಕ್ಷಾವನ್ನೂ ಕೊಂಡೊಯ್ದಿದ್ದಾರೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ದಗನ್‌ಭುಯಾನ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.