ಬಾಂಗ್ಲಾದೇಶದಲ್ಲಿ ನಡೆದ ಪತ್ರಿಭಟನೆಯಲ್ಲಿ ವ್ಯಕ್ತಿಯೊಬ್ಬ ಬಾಂಗ್ಲಾ ಧ್ವಜ ಹಿಡಿದಿರುವುದು
ರಾಯಿಟರ್ಸ್ ಚಿತ್ರ
ಢಾಕಾ: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳ 271 ಕಿ.ಮೀ ವ್ಯಾಪ್ತಿಯ ಗಡಿ ಭಾಗದ ಮೇಲೆ ಹಿಡಿತ ಸಾಧಿಸಿರುವ ಮ್ಯಾನ್ಮಾರ್‌ನ ಬಂಡುಕೋರರ ಗುಂಪಾದ ‘ಅರಾಕನ್ ಆರ್ಮಿ’ (ಎಎ) ಮತ್ತು ಅಲ್ಲಿನ ಸರ್ಕಾರದ ಜತೆ ಸಂಪರ್ಕದಲ್ಲಿ ಇರುವುದಾಗಿ ಪ್ರೊ. ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ತಿಳಿಸಿದೆ.
‘ಉಭಯ ದೇಶಗಳ ನಡುವಿನ 271 ಕಿ.ಮೀ ಉದ್ದದ ಗಡಿ ಪ್ರದೇಶ ಸಂಪೂರ್ಣವಾಗಿ ಅರಾಕನ್ ಆರ್ಮಿ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ಮ್ಯಾನ್ಮಾರ್‌ನ ಸರ್ಕಾರ ದೇಶವನ್ನು ಮುನ್ನಡೆಸುತ್ತಿದೆ’ ಎಂದು ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಂಗೀರ್ ಆಲಂ ಚೌಧರಿ ಸುದ್ದಿಗಾರರಿಗೆ ಹೇಳಿದ್ದಾರೆ.
‘ಹೀಗಾಗಿಯೇ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶವು, ಮ್ಯಾನ್ಮಾರ್ ಸರ್ಕಾರ ಮತ್ತು ಎ.ಎ ಜತೆ ಸಂಪರ್ಕದಲ್ಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಗಡಿ ಭಾಗದಲ್ಲಿ ಬಾಂಗ್ಲಾದೇಶ ಭದ್ರತಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ. ಆದರೆ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.