ADVERTISEMENT

ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಪಿಟಿಐ
Published 11 ಡಿಸೆಂಬರ್ 2025, 17:11 IST
Last Updated 11 ಡಿಸೆಂಬರ್ 2025, 17:11 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ಢಾಕಾ: ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯಿಂದಾಗಿ 2024ರ ಆಗಸ್ಟ್‌ನಲ್ಲಿ ಶೇಕ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದು.

‘ಸಾರ್ವತ್ರಿಕ ಚುನಾವಣೆಯ ಮತದಾನದ ಪ್ರಕ್ರಿಯೆ ಫೆಬ್ರುವರಿ 12ರ ಬೆಳಿಗ್ಗೆ 7.30ರಿಂದ ಸಂಜೆ 4.30ರ ವರೆಗೆ ನಡೆಯಲಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಎಎಂಎಂ ನಾಸಿರುದ್ದೀನ್‌ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರದ ಹಲವು ಸುಧಾರಣಾ ಪ್ರಸ್ತಾವಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ತಿಳಿದುಕೊಳ್ಳಲು ಜನಮತಸಂಗ್ರಹ ಪ್ರಕ್ರಿಯೆ ಕೂಡಾ ಮತದಾನದ ದಿನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.