ಬೆಂಜಮಿನ್ ನೆತನ್ಯಾಹು
ದುಬೈ/ವಾಷಿಂಗ್ಟನ್/ಕೈರೊ: ‘ದಬ್ಬಾಳಿಕೆಯ ನೊಗವನ್ನು ಕಿತ್ತೊಗೆದು ಮುಕ್ತ ಹಾಗೂ ಶಾಂತಿಯುತ ಇರಾನ್ ನಿರ್ಮಾಣಕ್ಕೆ ಇರಾನ್‌ನ ಎಲ್ಲ ನಾಗರಿಕರು ಕೈ ಜೋಡಿಸಬೇಕು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದಾರೆ.
‘ದಾಳಿಗೆ ಕೈ ಜೋಡಿಸಿದ ಟ್ರಂಪ್‌ಗೆ ಧನ್ಯವಾದ ಸಲ್ಲಿಸಿದ ಅವರು, ಮಾನವ ಕುಲಕ್ಕೆ ಕಂಟಕಪ್ರಾಯವಾಗಿರುವ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರಬಾರದು’ ಎಂದು ಹೇಳಿದ್ದಾರೆ.
‘ನಮ್ಮ ಜಂಟಿ ಕಾರ್ಯಾಚರಣೆಯಿಂದ ಧೈರ್ಯಶಾಲಿ ಇರಾನ್‌ನ ಜನರು ತಮ್ಮ ಹಣೆಬರಹವನ್ನು ತಾವೇ ಕೈಗೆ ತೆಗೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.
‘ಇಸ್ರೇಲ್‌ನಲ್ಲಿ ವಿಶೇಷ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಘೋಷಿಸಿದ್ದಾರೆ.
ಇರಾನ್ ದಾಳಿಯ ಬೆನ್ನಲ್ಲೇ, ಕತಾರ್, ಯುಎಇನಲ್ಲಿರುವ ರಾಯಭಾರ ಕಚೇರಿಯ ಸಿಬ್ಬಂದಿಗೆ ಅಡಗುದಾಣಗಳಲ್ಲಿ ಆಶ್ರಯ ಪಡೆಯುವಂತೆ ಇಸ್ರೇಲ್ ಹಾಗೂ ಅಮೆರಿಕ ಸೂಚನೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.