ADVERTISEMENT

ಅಮೆರಿಕ ರಫ್ತು ಮಂಡಳಿಗೆ ಭಾರತೀಯರ ನೇಮಕ: ಜೋ ಬೈಡನ್‌ ಘೋಷಣೆ

ಪಿಟಿಐ
Published 1 ಮಾರ್ಚ್ 2023, 16:01 IST
Last Updated 1 ಮಾರ್ಚ್ 2023, 16:01 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಂತರರಾಷ್ಟ್ರೀಯ ವ್ಯಾಪಾರ ವಿಚಾರದಲ್ಲಿ ಪ್ರಧಾನ ರಾಷ್ಟ್ರೀಯ ಸಲಹಾ ಸಮಿತಿಯಾಗಿರುವ ರಫ್ತು ಮಂಡಳಿಗೆ ಭಾರತ ಮೂಲದ ಉದ್ಯಮಿಗಳಾದ ಪುನೀತ್‌ ರೇಂಜೆನ್‌ ಮತ್ತು ರಾಜೇಶ್‌ ಸುಬ್ರಮಣ್ಯಂ ಅವರನ್ನು ನೇಮಕ ಮಾಡಿಕೊಳ್ಳಲು ಇಚ್ಛಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಘೋಷಿಸಿದ್ದಾರೆ.

‘ಮಂಡಳಿಗೆ ನೇಮಕ ಮಾಡಿಕೊಳ್ಳಲು ಬಯಸುವ ಸದಸ್ಯರ ಪಟ್ಟಿಯನ್ನು ಮಂಗಳವಾರ ಬೈಡನ್‌ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ರೇಂಜೆನ್‌ ಮತ್ತು ಸುಬ್ರಮಣ್ಯಂ ಅವರ ಹೆಸರಿದೆ’ ಎಂದು ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದೆ.

ರೇಂಜೆನ್‌ ಅವರು ಡೆಲೊಯಟ್‌ ಕನ್ಸಲ್ಟಿಂಗ್‌ ಮಾಜಿ ಸಿಇಒ ಮತ್ತು ಸುಬ್ರಮಣ್ಯಂ ಅವರು ಫೆಡೆಕ್ಸ್‌ ಸಿಇಒ ಹಾಗೂ ಅಧ್ಯಕ್ಷರಾಗಿದ್ದಾರೆ.

ADVERTISEMENT

ಎಕನಾಮಿಕ್ಸ್ ಟೈಮ್ಸ್‌ 2022ರಲ್ಲಿ ರೇಂಜೆನ್ ಅವರನ್ನು ‘ವರ್ಷದ ಜಾಗತಿಕ ಭಾರತೀಯ’ ಎಂದು ಗುರುತಿಸಿತ್ತು. 2023ರಲ್ಲಿ ಸುಬ್ರಮಣ್ಯಂ ಅವರು ‘ಪ್ರವಾಸಿ ಭಾರತೀಯ ಸಮ್ಮಾನ್‌’ ಪ್ರಶಸ್ತಿಗೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.