ADVERTISEMENT

ರಷ್ಯಾಗೆ ಸೇನೆ, ಆರ್ಥಿಕ ನೆರವು ನೀಡದಂತೆ ಚೀನಾಗೆ ಅಮೆರಿಕ ಎಚ್ಚರಿಕೆ 

ರಷ್ಯಾ–ಉಕ್ರೇನ್‌ ಸಂಘರ್ಷ

ಏಜೆನ್ಸೀಸ್
Published 18 ಮಾರ್ಚ್ 2022, 21:22 IST
Last Updated 18 ಮಾರ್ಚ್ 2022, 21:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌, ಬೀಜಿಂಗ್‌: ರಷ್ಯಾಕ್ಕೆ ಆರ್ಥಿಕ ಹಾಗೂ ಸೇನಾ ನೆರವು ನೀಡಬಾರದು ಎಂದು ಅಮೆರಿಕ ಶುಕ್ರವಾರ ಚೀನಾಕ್ಕೆ ಎಚ್ಚರಿಕೆ ನೀಡಿದೆ.

ರಷ್ಯಾ ಮತ್ತು ಉಕ್ರೇನ್‌ ಸಂಘರ್ಷದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಡುವೆ ವಿಡಿಯೊ ಕರೆಯ ಮಾತುಕತೆಗೂ ಮೊದಲು, ಶ್ವೇತಭವನ ಚೀನಾಕ್ಕೆ ಈ ಎಚ್ಚರಿಕೆ ನೀಡಿತು.

ವಿಡಿಯೊ ಕರೆಯ ಮಾತುಕತೆಯಲ್ಲಿ ಬೈಡನ್‌ ಅವರು ಉಕ್ರೇನ್‌ ಮೇಲಿನ ಆಕ್ರಮಣ ಉತ್ತೇಜಿಸಲು ಚೀನಾ, ರಷ್ಯಾಗೆ ನೆರವು ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜಿನ್‌ಪಿಂಗ್‌ ಅವರಿಗೆ ನೇರ ಎಚ್ಚರಿಕೆ ನೀಡಿದರು. ರಷ್ಯಾದ ಆಕ್ರಮಣ ಖಂಡಿಸುವ ನಿರ್ಣಯ ಬೆಂಬಲಿಸದಿರುವ ಬಗ್ಗೆಯೂ ಜಿನ್‌ಪಿಂಗ್‌ ಅವರನ್ನು ಬೈಡನ್‌ ಪ್ರಶ್ನಿಸಿದರು ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ಹೇಳಿದರು.

ADVERTISEMENT

‘ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುವ ಮೂಲಕ ರಷ್ಯಾವನ್ನು ಅಮೆರಿಕ ಪ್ರಚೋದಿಸುತ್ತಿದೆ. ಸಂಘರ್ಷವನ್ನೂ ಹೆಚ್ಚಿಸುತ್ತಿದೆ’ ಎಂದು ಚೀನಾ ಮತ್ತೊಮ್ಮೆ ಆರೋಪಿಸಿತು. ಬಿಕ್ಕಟ್ಟಿನ ಇತ್ಯರ್ಥಕ್ಕೆ ಮಾತುಕತೆ ಮತ್ತು ಮಾನ
ವೀಯ ನೆಲೆಯಲ್ಲಿ ನೀಡುವ ನೆರವು ಮಾತ್ರ ಪರಿಹಾರ ಎಂದು ಪ್ರತಿಪಾದಿಸಿತು.

ವಿಶ್ವದ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಚೀನಾ ಮತ್ತು ಅಮೆರಿಕ‌ದ ಜಂಟಿ ಸಹಕಾರ ಅಗತ್ಯ ಎಂದು ಜಿನ್‌ಪಿಂಗ್‌ ಅವರು ಬೈಡನ್‌ಗೆ ತಿಳಿಸಿದರು.

ಆರೋಪ ನಿರಾಕರಿಸಿದ ಚೀನಾ: ರಷ್ಯಾಕ್ಕೆ ಸೇನಾ ನೆರವು ನೀಡಿದೆ ಎಂಬ ಮಾಧ್ಯಮ ವರದಿಗಳನ್ನು ಚೀನಾ ಸರ್ಕಾರ ಅಲ್ಲಗೆಳೆದಿದೆ. ರಷ್ಯಾದ ಗಡಿಯಲ್ಲಿ ಚೀನಾದ ಸೇನಾ ಪಡೆಗಳು ಬೀಡುಬಿಟ್ಟಂತೆ ತೋರಿಸಿರುವ ಚಿತ್ರ ನಕಲಿ ಎಂದು ಅದು ಸ್ಪಷ್ಟನೆನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.