ADVERTISEMENT

ಕಮಲಾ ಹ್ಯಾರಿಸ್ ವಿರುದ್ಧ ದ್ವೇಷ ಬೇಡ: ಜೋ ಬಿಡೆನ್ ಟಿಪ್ಪಣಿಯಲ್ಲಿ ಪ್ರಸ್ತಾಪ

ಏಜೆನ್ಸೀಸ್
Published 29 ಜುಲೈ 2020, 6:33 IST
Last Updated 29 ಜುಲೈ 2020, 6:33 IST
ಜೋ ಬಿಡೆನ್ ಅವರು ಸುದ್ದಿಗೋಷ್ಠಿ ವೇಳೆ ಹಿಡಿದುಕೊಂಡಿದ್ದ ಟಿಪ್ಪಣಿಯಲ್ಲಿ ಕಮಲಾ ಹ್ಯಾರಿಸ್ ಬಗ್ಗೆ ಉಲ್ಲೇಖವಿದೆ–ಎಎಫ್‌ಪಿ ಚಿತ್ರ
ಜೋ ಬಿಡೆನ್ ಅವರು ಸುದ್ದಿಗೋಷ್ಠಿ ವೇಳೆ ಹಿಡಿದುಕೊಂಡಿದ್ದ ಟಿಪ್ಪಣಿಯಲ್ಲಿ ಕಮಲಾ ಹ್ಯಾರಿಸ್ ಬಗ್ಗೆ ಉಲ್ಲೇಖವಿದೆ–ಎಎಫ್‌ಪಿ ಚಿತ್ರ   

ವಿಲ್ಮಿಂಗ್‌ಟನ್, ಅಮೆರಿಕ: ಉಪಾಧ್ಯಕ್ಷರ ಹುಡುಕಾಟದಲ್ಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಮಂಗಳವಾರ ಈ ಬಗ್ಗೆ ತುಟಿಬಿಚ್ಚಲಿಲ್ಲ. ಆದರೆ ಸುದ್ದಿಗೋಷ್ಠಿಯಲ್ಲಿ ಅವರು ಹಿಡಿದುಕೊಂಡಿದ್ದ ಟಿಪ್ಪಣಿಯಲ್ಲಿ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ಬಗ್ಗೆ ಒಂದಿಷ್ಟು ಉಲ್ಲೇಖಗಳನ್ನು ಮಾಡಲಾಗಿತ್ತು. ಟಿಪ್ಪಣಿಯಲ್ಲಿ ಅವರ ಹೆಸರು ಮೇಲ್ಪಂಕ್ತಿಯಲ್ಲಿತ್ತು.

‘ಕಮಲಾ ವಿರುದ್ಧ ದ್ವೇಷ ಸಲ್ಲದು’, ‘ನನ್ನೊಂದಿಗೆ ಚುನಾವಣಾ ಪ್ರಚಾರ ಮಾಡಿದ್ದಾರೆ’, ‘ಬುದ್ಧಿವಂತೆ’, ‘ಪ್ರಚಾರದ ವೇಳೆ ದೊಡ್ಡ ಸಹಾಯ’, ‘ಅವರ ಬಗ್ಗೆ ಅಪಾರ ಗೌರವವಿದೆ’ ಎಂಬ ಐದು ವಾಕ್ಯಗಳು ಟಿಪ್ಪಣಿಯಲ್ಲಿ ಇದ್ದವು. ಇವು ಕಮಲಾ ಬಗ್ಗೆ ಬಿಡೆನ್ ಅವರಿಗಿರುವ ಅಭಿಪ್ರಾಯಗಳು ಎಂದು ವಿಶ್ಲೇಷಿಸಲಾಗಿದೆ.

ಹ್ಯಾರಿಸ್ ಅವರನ್ನು ಬಿಡೆನ್ ಸಾರ್ವಜನಿಕವಾಗಿ ಹಲವು ಬಾರಿ ಪ್ರಶಂಸಿಸಿದ್ದಾರೆ. ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಸಾಕಷ್ಟು ಗೌರವ ಹೊಂದಿದ್ದಾರೆ. ಈ ಮೊದಲು ಬಿಡೆನ್ ವಿರೋಧಿಯಾಗಿದ್ದ ಕಮಲಾ, ಚುನಾವಣಾ ಪ್ರಚಾರ ಆರಂಭವಾದ ಬಳಿಕಬಿಡೆನ್‌ಗೆ ವಿಶ್ವಾಸಾರ್ಹ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾರೆ. ಅವರೊಂದಿಗೆ ಆನ್‌ಲೈನ್ ನಿಧಿ ಸಂಗ್ರಹ ಕಾರ್ಯದಲ್ಲೂ ಕಾಣಿಸಿಕೊಂಡಿದ್ದಾರೆ.

ADVERTISEMENT

ಕಳೆದ ನಾಲ್ಕು ತಿಂಗಳಲ್ಲಿ ಔಪಚಾರಿಕವಾಗಿ ಮೂರನೇ ಸುದ್ದಿಗೋಷ್ಠಿ ನಡೆಸಿದ ಬಿಡೆನ್, ಉಪಾಧ್ಯಕ್ಷರು ಯಾರಾಗಬೇಕು ಎಂಬ ಪ್ರಶ್ನೆಗಳಿಗೆ ನಿರ್ಧಿಷ್ಟವಾಗಿ ಉತ್ತರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.