ADVERTISEMENT

ವಾರದಲ್ಲಿ ಎರಡು ಸಲ ಹೃದಯಾಘಾತ; ಫಿಟ್‌ನೆಸ್ ಮಾಹಿತಿ ಹಂಚಿಕೊಳ್ಳುತ್ತಿದ್ದಾಕೆ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2023, 16:01 IST
Last Updated 31 ಆಗಸ್ಟ್ 2023, 16:01 IST
<div class="paragraphs"><p>ಲಾರಿಸ್ಸಾ ಬೋರ್ಗಸ್‌–ಇನ್‌ಸ್ಟಾಗ್ರಾಮ್‌ ಚಿತ್ರ</p></div>

ಲಾರಿಸ್ಸಾ ಬೋರ್ಗಸ್‌–ಇನ್‌ಸ್ಟಾಗ್ರಾಮ್‌ ಚಿತ್ರ

   

ಬ್ರೆಜಿಲ್‌: ಒಂದೇ ವಾರದಲ್ಲಿ ಎರಡು ಬಾರಿ ಹೃದಯಾಘಾತ ಸಂಭವಿಸಿದ ಪರಿಣಾಮ ಬ್ರೆಜಿಲ್‌ನ ಫಿಟ್ನೆಸ್‌ ಇನ್‌ಫ್ಲುಯೆನ್ಸರ್ ಲಾರಿಸ್ಸಾ ಬೋರ್ಗಸ್‌ (33) ಅವರು‌ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಲಾರಿಸ್ಸಾ ಮೃತಪಟ್ಟಿರುವುದನ್ನು ಅವರ ಕುಟುಂಬ ಖಚಿತಪಡಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡ ಕುಟುಂಬ ಸದಸ್ಯರು, ಸಣ್ಣ ವಯಸ್ಸಿನ ಸದಸ್ಯರೊಬ್ಬರನ್ನು ಕಳೆದುಕೊಳ್ಳುವುದು ನೋವಿನ ಸಂಗತಿಯಾಗಿದೆ. ಹೃದಯ ಭಾರವಾಗಿದೆ, ಈ ಪರಿಸ್ಥಿತಿಯನ್ನು ವಿವರಿಸಲು ಕಷ್ಟವಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. 

ADVERTISEMENT

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಲಾರಿಸ್ಸಾ ಅವರಿಗೆ ಆಗಸ್ಟ್‌ 20ರಂದು ಮೊದಲ ಭಾರಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೋಮಾಗೆ ಹೋಗಿದ್ದು, ವಾರದಲ್ಲಿಯೇ ಎರಡನೇ ಬಾರಿ ಹೃದಯಾಘಾತವಾಗಿದೆ. ಹೀಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಲಾರಿಸ್ಸಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಹೃದಯ ಸಮಸ್ಯೆ ಎದುರಾದಾಗ ಅವರು ಆಲ್ಕೋಹಾಲ್‌ ಸೇವನೆ ಮಾಡಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ. 

ಲಾರಿಸ್ಸಾ ಪ್ರತಿದಿನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರ ಫಿಟ್ನೆಸ್‌, ಫ್ಯಾಷನ್‌, ಟ್ರಾವೆಲ್‌ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.