ನರೇಂದ್ರ ಮೋದಿ
(ಚಿತ್ರ ಕೃಪೆ: X/@narendramodi)
ರಿಯೊ ಡಿ ಜನೈರೊ: ಅರ್ಜೆಂಟೀನಾ ಪ್ರವಾಸದ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರೆಜಿಲ್ ಪ್ರವಾಸ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಅವರು 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಸಂಜೆ (ಸ್ಥಳೀಯ ಕಾಲಮಾನ) ಗಲಿಯೊ ಅಂತರರಾಷ್ಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಸಾಂಪ್ರಾದಾಯಿಕವಾಗಿ ಸ್ವಾಗತಿಸಲಾಯಿತು.
ಇದು ಐದು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರ ನಾಲ್ಕನೇ ದೇಶದ ಭೇಟಿಯಾಗಿದೆ. ಈ ಮೊದಲು ಘಾನಾ, ಟ್ರಿನಿಡಾಡ್ ಆ್ಯಂಡ್ ಟೊಬಾಗೊ ಹಾಗೂ ಅರ್ಜೇಂಟೀನಾಕ್ಕೆ ಭೇಟಿ ನೀಡಿದ್ದರು.
'ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಬಂದಿಳಿದಿದ್ದೇನೆ. ಅಲ್ಲಿ ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ನಂತರ ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಆಹ್ವಾನದ ಮೆರೆಗೆ ರಾಜಧಾನಿ ಬ್ರೆಸಿಲಿಯಾಗೆ ಹೋಗಲಿದ್ದೇನೆ. ಈ ಭೇಟಿಯ ಸಂದರ್ಭದಲ್ಲಿ ಫಲಪ್ರದಾಯಕ ಮಾತುಕತೆ ಎದುರು ನೋಡುತ್ತಿದ್ದೇನೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜುಲೈ 6 ಹಾಗೂ 7ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ದ್ವಿಪಕ್ಷೀಯ ಸಹಕಾರಕ್ಕಾಗಿ ಕಳೆದ ಆರು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಕೈಗೊಂಡ ಮೊದಲ ಬ್ರೆಸಿಲ್ ಭೇಟಿ ಇದಾಗಿದೆ.
ಇದಕ್ಕೂ ಮೊದಲು ಅರ್ಜೆಂಟೀನಾ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒತ್ತು ನೀಡಲಾಯಿತು. ವ್ಯಾಪಾರ, ರಕ್ಷಣೆ, ಖನಿಜ, ಔಷಧ, ಇಂಧನ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಿಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.